ಉಕ್ರೇನ್ –ರಷ್ಯಾ ಯುದ್ಧ ತುಂಬಾ ಕ್ರೂರವಾಗಿದೆ; ಅಮೆರಿಕಾಉಕ್ರೇನ್ ಜೊತೆಗಿದೆ: ಜಿಲ್ ಬೈಡನ್

Prasthutha|

ಕೀವ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರು ಯುದ್ಧಪೀಡಿತ ಉಕ್ರೇನ್‌ಗೆ   ಭೇಟಿ ನೀಡಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪತ್ನಿ ಒಲೆನಾ ಝೆಲೆನ್‌ಸ್ಕಾ ಜತೆ ಮಾತುಕತೆ ನಡೆಸಿದರು.

- Advertisement -

ಮಾಧ್ಯಮ ಪ್ರತಿನಿಧಿಗಳ ಜೊತೆ  ಮಾತನಾಡಿದ ಅವರು, ಈ ಯುದ್ಧವನ್ನು ನಿಲ್ಲಿಸಬೇಕಾಗಿದೆ.  ಇದು ತುಂಬಾ ಕ್ರೂರವಾದದ್ದು. ಅಮೆರಿಕದ ಜನರು ಉಕ್ರೇನ್‌ ಜನರ ಜತೆಗಿದ್ದಾರೆ ಎಂಬುದನ್ನು ತೋರಿಸಿಕೊಡಬೇಕಾದದ್ದು ಮುಖ್ಯ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.

ಜಿಲ್ ಬೈಡನ್ ಅವರು ಉಕ್ರೆನ್ ಮತ್ತು ಆ ದೇಶದ ಮೇಲೆ ರಷ್ಯಾ ಅತಿಕ್ರಮಣ ಆರಂಭವಾದ ಬಳಿಕ ನೆರವು ನೀಡುತ್ತಿರುವ ದೇಶಗಳಿಗೆ ‍ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕದ ಬೆಂಬಲ ಪ್ರದರ್ಶಿಸುವ ಸಲುವಾಗಿ ಅವರು ಈ ಪ್ರವಾಸ ಕೈಗೊಂಡಿದ್ದು, ಸ್ಲೊವಾಕಿಯಾ ಮೂಲಕ ಅವರು ಉಕ್ರೇನ್‌ಗೆ ಪ್ರಯಾಣ ಬೆಳೆಸಿದ್ದರು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ರಷ್ಯಾದ ಅತಿಕ್ರಮಣ ಆರಂಭವಾದ ಬಳಿಕ ಝೆಲೆನ್‌ಸ್ಕಿ ಪತ್ನಿ ಒಲೆನಾ ಝೆಲೆನ್‌ಸ್ಕಾ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ ಎಂದು ಜಿಲ್ ಬೈಡನ್ ಜತೆ ಪ್ರಯಾಣ ಕೈಗೊಂಡಿರುವ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp