ಕೀವ್: ಉಕ್ರೇನ್ ನ ಕೀವ್ ನಲ್ಲಿ ಪತ್ತೆಯಾಗಿರುವ ಸಾಮೂಹಿಕ ಸಮಾಧಿಗಳಲ್ಲಿದ್ದ ಮೃತದೇಹಗಳ ಮರಣೋತ್ತರ ಪರೀಕ್ಷೆಗಳು ಆರಂಭವಾಗಿದ್ದು, ಆಘಾತಕಾರಿ ಮಾಹಿತಿಗಳು ವರದಿಯಾಗುತ್ತಿವೆ.
ಮಹಿಳೆಯರನ್ನು ಗುಂಡಿಕ್ಕಿ ಕೊಲೆಗೈಯ್ಯುವ ಮುನ್ನ ಅತ್ಯಾಚಾರ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ದೇಹಗಳ ಮೇಲೆ ಆಗಿರುವ ಗಾಯಗಳನ್ನು ನೋಡಿದರೆ, ಚಿತ್ರಹಿಂಸೆ ನೀಡಿ ಕೊಂದಿರುವುದು ಗೊತ್ತಾಗುತ್ತದೆ. ಇನ್ನೂ ನೂರಾರು ಮೃತದೇಹಗಳ ಪರೀಕ್ಷೆ ಬಾಕಿಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ಮತ್ತಷ್ಟು ತೀವ್ರಗೊಳಿಸಿದ್ದು, ಕ್ರಿಮಿನ್ನಾ ನಗರ ವನ್ನು ರಷ್ಯಾ ವಶಪಡಿಸಿಕೊಂಡಿದೆ. ಉಕ್ರೇನ್ನ ಯುದ್ಧ ವಿಮಾನಗಳಿಗೆ ಇಂಧನ ಪೂರೈಕೆ ಸ್ಥಗಿತಗೊಳಿಸುವ ಉದ್ದೇಶದಿಂದ ಅಲ್ಲಿನ ಒಂದೊಂದೇ ತೈಲಾಗಾರಗಳನ್ನು ಹುಡುಕಿ ದಾಳಿ ಮಾಡಲು ಆರಂಭಿಸಿದೆ.