ರಷ್ಯಾದ ಮೇಜರ್ ಜನರಲ್’ನನ್ನು ಹತ್ಯೆ ಮಾಡಿದ ಉಕ್ರೇನ್

Prasthutha|

ಎಲ್ವಿವ್: ಉಕ್ರೇನ್ ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಸುತ್ತಮುತ್ತ ನಡೆದ ಸಂಘರ್ಷದಲ್ಲಿ ರಷ್ಯಾದ ಜನರಲ್ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಮಿಲಿಟರಿ ಗುಪ್ತಚರ ಸಂಸ್ಥೆ ತಿಳಿಸಿದೆ.

- Advertisement -

ಮೃತಪಟ್ಟ ಅಧಿಕಾರಿಯನ್ನು ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್(45) ಎಂದು ಗುರುತಿಸಲಾಗಿದೆ. ವಿಟಾಲಿ ಗೆರಾಸಿಮೊವ್ ಸಿರಿಯಾ ಮತ್ತು ಚೆಚೆನ್ಯಾದಲ್ಲಿ ನಡೆದ ಯುದ್ಧದಲ್ಲಿ ರಷ್ಯಾದ ಪಡೆಗಳೊಂದಿಗೆ ಹೋರಾಡಿದ್ದರು. 2014ರಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಂಡಾಗ ಆ ಯುದ್ಧದಲ್ಲಿ ಭಾಗಿಯಾಗಿದ್ದರು.



Join Whatsapp