ಕೀವ್: ಯುದ್ಧ ಪೀಡಿತ ಉಕ್ರೇನ್’ನಲ್ಲಿ ಸಿಲುಕಿರುವ ಸಂತ್ರಸ್ತರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ನಾಲ್ಕು ವಿಮಾನಗಳು ಸೇವೆ ಆರಂಭಿಸಿದೆ.
ಎರಡು ವಿಮಾನಗಳನ್ನು ರೊಮೇನಿಯಾಕ್ಕೆ ಮತ್ತು ಒಂದು ವಿಮಾನವನ್ನು ಹಂಗೇರಿಗೆ ಕಳುಹಿಸಲಾಗುವುದು. ಮತ್ತೊಂದು ವಿಮಾನ ಸ್ಥಳಾಂತರದ ಪ್ರಕ್ತಿಯೆ ಈಗಾಗಲೇ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ರಷ್ಯಾವು ಸತತ ಮೂರನೇ ದಿನವೂ ಉಕ್ರೇನ್ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ರಷ್ಯಾ ಸೈನ್ಯವು ಭಾರೀ ಪ್ರತಿರೋಧ ನಡೆಯುತ್ತಿರುವ ಉಕ್ರೇನ್ ರಾಜಧಾನಿ ಕೀವ್ ಅನ್ನು ಸಂಪೂರ್ಣವಾಗಿ ಮುಚ್ಚಿದೆ ಎಂದು ಹೇಳಲಾಗಿದೆ.
ಪ್ರಸಕ್ತ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದಾರೆ. ಸದ್ಯ ಯುದ್ಧಪೀಡಿಯ ಉಕ್ರೇನ್ ನಲ್ಲಿರುವ ಸಂತ್ರಸ್ತ ವಿದ್ಯಾರ್ಥಿಗಳು ಭಯದ ನೆರಳಿನಲ್ಲಿದ್ದಾರೆ ಮತ್ತು ಭಾರತಕ್ಕೆ ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಪಾರ್ಥ ಸತ್ಪತಿ ಅವರು ಉಕ್ರೇನ್ ನಿಂದ ಭಾರತೀಯರನ್ನು ನೆರೆ ರಾಷ್ಟ್ರದ ಮೂಲಕ ಸ್ಥಳಾಂತರಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಎಂದು ತಿಳಿಸಿದ್ದಾರೆ.