ಲಂಡನ್: ಅನಿಮೇಟೆಡ್ ಗ್ರಾಫಿಕ್ಸ್ ಸ್ಪಾರ್ಟ್ ಅಪ್ ಗಿಫಿ ಸ್ವಾಧೀನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪೂರೈಸಲು ವಿಫಲವಾದ ಕಾರಣ ಸಾಮಾಜಿಕ ಜಾಲತಾಣದ ಬೃಹತ್ ಕಂಪೆನಿಯಾದ ಫೇಸ್ಬುಕ್ ಗೆ 50. 5 ಮಿಲಿಯನ್ ಪೌಂಡ್ ( 520 ಕೋಟಿ ಭಾರತೀಯ ರುಪಾಯಿ) ಕ್ಕೂ ಅಧಿಕ ಮೊತ್ತದ ದಂಡವನ್ನು ವಿಧಿಸಲಾಗಿದೆ ಎಂದು ಬ್ರಿಟನ್ ಸ್ಪರ್ದೆಯ ವಾಚ್ಡಾಗ್ ಬುಧವಾರ ತಿಳಿಸಿದೆ.
ಸ್ಪರ್ದೆ ಮತ್ತು ಮಾರುಕಟ್ಟೆ ಪ್ರಾಧಿಕಾರ ಕಳೆದ ವರ್ಷ ಖರೀದಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ವರದಿ ಮಾಡಲು ಉದ್ದೇಶಪೂರ್ವಕವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ಒಟ್ಟು 50.5 ಮಿಲಿಯನ್ ಪೌಂಡ್ ಅನ್ನು ದಂಡ ವಿಧಿಸಿದೆ ಎಂದು ಹೇಳಿದೆ.
ಪ್ರಮುಖ ಮಾಹಿತಿಗಳನ್ನು ಒದಗಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹಲವಾರು ಸಲ ಎಚ್ಚರಿಸ್ದಿದ ಹೊರತಾಗಿಯೂ ನಮ್ಮ ಆದೇಶವನ್ನು ಉಲ್ಲಂಘಿಸಿದೆ ಎಂದು CMA, ಇದರ ಆಡಳಿತ ನಿರ್ದೇಶಕರಾದ ಜೋಯಲ್ ಬಾಮ್ ಫೋರ್ಡ್ ಅವರು ತಿಳಿಸಿದರು.
ಅನಿಮೇಟೆಡ್ ಜಿಫಿಯನ್ನು ಫೇಸ್ಬುಕ್ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ತನ್ನ ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಫೇಸ್ಬುಕ್ ಮೇ, 2020 ರಲ್ಲಿ ಜಿಫಿಯನ್ನು $ 400 ಮಿಲಿಯನ್ ಗೆ ಖರೀದಿಸುವುದಾಗಿ ಘೋಷಿಸಿತ್ತು.