ದಲಿತರನ್ನು ಏಕೆ ಆರೆಸ್ಸೆಸ್ ಸರಸಂಘಚಾಲಕನಾಗಿ ನೇಮಿಸಿಲ್ಲ: ಉಗ್ರಪ್ಪ

Prasthutha|

ಬಚ್ಚಲು ಮನೆಯ ಚಡ್ಡಿಯನ್ನು ಬಿ. ಎಲ್ ಸಂತೋಷ ಹೊರಲಿಲ್ಲ. ನಾರಾಯಣ ಸ್ವಾಮಿ ಮೂಲಕ ಹೊರಿಸಿದ್ದಾರೆ

- Advertisement -

ಬೆಂಗಳೂರು: ದಲಿತರನ್ನು ಏಕೆ ಆರೆಸ್ಸೆಸ್ ಸರಸಂಘಚಾಲಕನ್ನಾಗಿ ನೇಮಿಸಿಲ್ಲ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.
ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಜತೆ ಬೆಂಗಳೂರಿನ ಕ್ವೀನ್ಸ್​ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ ಆರ್ ಎಸ್ ಎಸ್ ನಲ್ಲಿ 56 ಸಾವಿರ ಶಾಖೆಗಳು ಇವೆ . ಆರ್ ಎಸ್ ಎಸ್ ಬೆಂಬಲಿತ 43 ಸಂಘಟನೆಗಳಿವೆ. ರಾಜ್ಯದಲ್ಲಿ 126 ಮಂದಿ ಆರ್ ಎಸ್ ಎಸ್ ಪ್ರಮುಖರಿದ್ದಾರೆ. ಆದರೆ, ಇವರಲ್ಲಿ ಒಕ್ಕಲಿಗರು ಎಷ್ಟು, ಹಿಂದುಳಿದ ವರ್ಗದ ಪ್ರಮುಖರು ಎಷ್ಟು ಮಂದಿ ಇದ್ದಾರೆ ? ಎಂದು ಹೇಳಿದರು.
ಬಚ್ಚಲ ಮನೆಯಲ್ಲಿ ಇದ್ದ ಚಡ್ಡಿಯನ್ನು ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ತಲೆಮೇಲೆ ಹೊತ್ತುಕೊಂಡು ಬಂದಿದ್ದಾರೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಆರ್ ಎಸ್ ಎಸ್ ಇದೆ. ಚಡ್ಡಿಯನ್ನು ಬಿ ಎಲ್ ಸಂತೋಷ ಹೊರಲಿಲ್ಲ. ನಾರಾಯಣ ಸ್ವಾಮಿ ಮೂಲಕ ಹೊರಿಸಿದ್ದಾರೆ. ಅವರು ಕಳುಹಿಸಿರುವಂತಹ ಚಡ್ಡಿಗಳನ್ನು ನಾವು ಪ್ರಧಾನಿ ಮೋದಿ ಅವರಿಗೆ ಕಳುಹಿಸುತ್ತೇವೆ. ನಿಮ್ಮ ವಿಚಾರಧಾರೆ ಸರಿಯಿಲ್ಲ ಎಂಬುದನ್ನು ನಾವು ಪ್ರಧಾನಿಗೆ ಕಳುಹಿಸುತ್ತೇವೆ. ಪಠ್ಯಕ್ರಮ ಸರಿಯಿಲ್ಲ ಎಂದು ನಾವು ಹೇಳಿದ್ದೆವು. ಅದಕ್ಕೆ ವಿಕೃತವಾಗಿ ಚಡ್ಡಿಗಳನ್ನು ಕಳುಹಿಸಿದ್ದಾರೆ. ಇದು ಬಿಜೆಪಿಯವಿಕೃತ ಮನೋಭಾವನೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಹೀಗೆ ಮಾಡಿದ್ದಾರೆ ಎಂದು ಉಗ್ರಪ್ಪ ಕಿಡಿಕಾರಿದರು.



Join Whatsapp