ಉಡುಪಿ: ಗೂಡ್ಸ್ ರಿಕ್ಷಾದಲ್ಲಿ ವ್ಯಕ್ತಿಯೊಬ್ಬರ ಮೃತದೇಹವನ್ನು ತಂದು ರಸ್ತೆ ಬದಿಯ ಕಸದ ಕೊಂಪೆಗೆ ಎಸೆದು ಹೋದ ದಾರುಣ ಘಟನೆ ಕೆಮ್ಮಣ್ಣು ಸಂತೆ ಮಾರುಕಟ್ಟೆಯ ಬಳಿ ಗುರುವಾರ ನಡೆದಿದೆ.
ಹನುಮಂತ ಮೃತ ವ್ಯಕ್ತಿ ಎಂದು ತಿಳಿದು ಬಂದಿದ್ದು, ಈತ ವಾರದ ಸಂತೆ ಹಿನ್ನೆಲೆಯಲ್ಲಿ ಕೆಮ್ಮಣ್ಣು ಮಾರುಕಟ್ಟೆಗೆ ವ್ಯಾಪಾರ ನಡೆಸಲು ಬಂದಿದ್ದ ಎನ್ನಲಾಗಿದೆ. ಆದರೆ ವಿಪರೀತ ಮದ್ಯಪಾನ ಮಾಡಿ ಅಲ್ಲೆ ಮೃತಪಟ್ಟಿದ್ದನು. ಇದನ್ನು ಕಂಡು ಇತರ ಇಬ್ಬರು ವ್ಯಾಪಾರಿಗಳು ಹನುಮಂತನ ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ಸಾಗಿಸಿಕೊಂಡು ಹೋಗಿ ಕೆಮ್ಮಣ್ಣು ಸಂತೆಮಾರುಕಟ್ಟೆ ಬಳಿಯ ರಸ್ತೆಬದಿ ಕಸದ ಕೊಂಪೆಯಲ್ಲಿ ಎಸೆದು ಹೋಗಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.