ಉಡುಪಿ: ಗ್ರಾನೈಟ್ ಬಿದ್ದು ಕಾರ್ಮಿಕರಿಬ್ಬರು ಮೃತ್ಯು

Prasthutha|

ಉಡುಪಿ: ಗ್ರಾನೈಟ್ ಅನ್ ಲೋಡ್ ಮಾಡುವಾಗ ಉತ್ತರ ಪ್ರದೇಶ ಮೂಲದ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಮಲ್ಪೆ ಬಳಿಯ ತೊಟ್ಟಂ ಪ್ರದೇಶದಲ್ಲಿ ನಡೆದಿದೆ.

- Advertisement -


ಮೃತ ಕಾರ್ಮಿಕರನ್ನು ಒಡಿಶಾ ಮೂಲದ ಬಾಬುಲ್ಲ (38) ಮತ್ತು ಭಾಸ್ಕರ (40) ಎಂದು ಗುರುತಿಸಲಾಗಿದೆ.


ತೊಟ್ಟಂನ ಕರಾವಳಿ ಯುವಕ ಮಂಡಳಿಯ ಬಳಿಕ ಮನೆಯೊಂದಕ್ಕೆ ಗ್ರಾನೈಟ್ ತರಲಾಗಿತ್ತು. ಇದನ್ನು ಇಳಿಸುವ ವೇಳೆ ಆಯತಪ್ಪಿ ಗ್ರಾನೈಟ್ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Join Whatsapp