ಉಡುಪಿ| ಆರು ಅಂಗಡಿಗಳ ನಗದು ಎತ್ತಂಗಡಿ ಮಾಡಿದ ಕಳ್ಳರು

Prasthutha|

ಉಡುಪಿ: ಆರು ಅಂಗಡಿಗಳ ಬೀಗ ಮುರಿದ ಕಳ್ಳರು ಅಲ್ಲಿದ್ದ ನಗದು ದೋಚಿ ಪರಾರಿಯಾಗಿರುವ ಘಟನೆ ಉಡುಪಿ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ದೊಡ್ಡಣಗುಡ್ಡೆಯ ಒಂದು ಬಟ್ಟೆ ಮಳಿಗೆ ಮತ್ತು ಮೂರು ಜನರಲ್ ಶಾಪ್ ಮತ್ತುಉಡುಪಿ ನಗರ ಠಾಣೆ ವ್ಯಾಪ್ತಿಯ ಗುಂಡಿಬೈಲ್‌ನಲ್ಲಿ ಎರಡು ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ.


ಉಡುಪಿ ಮತ್ತು ಮಣಿಪಾಲ ಠಾಣೆಯ ಪೊಲೀಸರು ಕಳ್ಳತನ ನಡೆದ ಅಂಗಡಿಗಳಿಗೆ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp