ಉಡುಪಿ: ವಿದ್ಯಾರ್ಥಿನಿ ನೀರುಪಾಲು

Prasthutha|

- Advertisement -

ಉಡುಪಿ: ಮಲ್ಪೆ ಸಮುದ್ರ ತೀರದಲ್ಲಿ ಶನಿವಾರ ತಡರಾತ್ರಿ ಒಬ್ಬ ವಿದ್ಯಾರ್ಥಿನಿ ನೀರು ಪಾಲಾಗಿದ್ದು, ಸಮುದ್ರದಲ್ಲಿ ಸಿಲುಕಿದ್ದ ಮತ್ತೊಬ್ಬ ವಿದ್ಯಾರ್ಥಿನಿಯನ್ನು ರಕ್ಷಿಸಲಾಗಿದೆ.

ಮೂರು ದಿನಗಳ ಹಿಂದೆ ಈ ವಿದ್ಯಾರ್ಥಿನಿಯರು ಮಡಿಕೇರಿಯಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಉಡುಪಿಗೆ ಹೇಗೆ ಬಂದರು, ಸಮುದ್ರಕ್ಕೆ ಹಾರಿದರೇ? ಆಟವಾಡುತ್ತಿದ್ದಾಗ ನೀರುಪಾಲಾದರೇ ಎಂಬ ವಿವರಗಳು ಲಭ್ಯವಾಗಿಲ್ಲ.

- Advertisement -

ಮಡಿಕೇರಿಯ ಖಾಸಗಿ ಕಾಲೇಜೊಂದರ ಪ್ರಥಮ ಪಿಯಸಿ ವಿದ್ಯಾರ್ಥಿನಿಯರಾದ ಮಾನ್ಯ ಮೃತಪಟ್ಟ ವಿದ್ಯಾರ್ಥಿನಿ. ಸಮುದ್ರದಲ್ಲಿ ಸಿಲುಕಿದ್ದ ಯಶಸ್ವಿನಿ ಎಂಬ ವಿದ್ಯಾರ್ಥಿನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.



Join Whatsapp