ಉಡುಪಿ: ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಉಡುಪಿ ಜಿಲ್ಲಾ ಘಟಕ ಅಸ್ಥಿತ್ವಕ್ಕೆ ತರಲಾಯಿತು. SDTU ಉಡುಪಿ ಜಿಲ್ಲೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಮೀರ್ ಮಜೂರು ಈ ಸಂದರ್ಭದಲ್ಲಿ ಮಾತನಾಡಿ ಉಡುಪಿ ಜಿಲ್ಲಾದ್ಯಂತ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕುಗಳ ಸಂರಕ್ಷಣೆಗಾಗಿ ಮತ್ತು ಶ್ರೇಯೀಭಿವೃದ್ಧಿಗಾಗಿ SDTU ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಉಪಾಧ್ಯಕ್ಷರಾಗಿ ನೂರುದ್ದೀನ್ ಫಕಿರ್ನ ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಜಲಾಲ್ ಕೊಂಬಗುಡ್ಡೆ, ಕಾರ್ಯದರ್ಶಿಯಾಗಿ ರಹ್ಮಾನ್ ನಿಟ್ಟೂರು, ಕೋಶಧಿಕಾರಿಯಾಗಿ ಅಶ್ರಫ್ ಸಂತೋಷ್ ನಗರ ಹಾಗೂ ಸದಸ್ಯರಾಗಿ ಸಮೀರ್ ಅತ್ರಾಡಿ, ಸಲಾಂ ನಿಟ್ಟೂರು, ಅಬೂಬಕ್ಕರ್ ಕಾಪು, ಸತ್ತಾರ್ ಉಡುಪಿ ಯವರನ್ನು ಆಯ್ಕೆ ಮಾಡಲಾಯಿತು.
ಕಾರ್ಮಿಕರು ಎದುರಿಸುವ ಸವಾಲುಗಳು ಮತ್ತು SDTU ನ ಗುರಿ ಎಂಬ ವಿಷಯವನ್ನು ಮಂಡಿಸಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು SDTU ಉಡುಪಿ ಜಿಲ್ಲೆಯ ರಾಜ್ಯ ಉಸ್ತುವಾರಿ ಕಾದರ್ ಫರಂಗಿಪೇಟೆ ನಡೆಸಿಕೊಟ್ಟರು, SDTU ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ಸದಸ್ಯ ಸಿದ್ದೀಕ್ ಕಣ್ಣಂಗಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು