ಉಡುಪಿ ತಾಯಿ ಮಕ್ಕಳ ಹತ್ಯೆ: ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಸಚಿವರಿಗೆ ಮನವಿ

Prasthutha|

ಉಡುಪಿ: ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂರು ಮಕ್ಕಳ ಬರ್ಬರ ಕೊಲೆ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯಕ್ಕೆ ವರ್ಗಾಯಿಸಿ ವಿಚಾರಣೆ ನಡೆಸಬೇಕು. ಹಂತಕನಿಗೆ ಗರಿಷ್ಠ ಪ್ರಮಾಣದ ಕಠಿಣ ಶಿಕ್ಷೆಯಾಗಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮೂಲಕ ಕಾನೂನು ಸಚಿವರಿಗೆ ಮನವಿ ಸಲ್ಲಿಸಿದೆ. ಇದೇ ಸಮಯದಲ್ಲಿ ಬಳಿಕ ಆರೋಪಿಯನ್ನು ಕೃತ್ಯ ನಡೆದ 2 ದಿನಗಳಲ್ಲಿ ಬಂಧಿಸಿದ ಪೊಲೀಸರ ಶ್ರಮ ಶ್ಲಾಘಿಸಿದ ವೇದಿಕೆ, ಎಸ್‌ಪಿ ಅರುಣ್ ಕುಮಾರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ. ಬಳಿಕ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ನಿಯೋಗ ಅವರಿಗೆ ಸಾಂತ್ವನ ಹೇಳಿದೆ.

- Advertisement -

ಮುಸ್ಲಿಂ ಸಾಹಿತಿಗಳು ಲೇಖಕರು, ಚಿಂತಕರ ವೇದಿಕೆಯಾದ ಮುಸ್ಲಿಂ ಬಾಂಧವ್ಯ ವೇದಿಕೆಯ ನಿಯೋಗದಲ್ಲಿ ವೇದಿಕೆಯ ಗೌರವಾಧ್ಯಕ್ಷ ಎಸ್.ಬಿ.ದಾರಿಮಿ, ಪ್ರಧಾನ ಕಾರ್ಯದರ್ಶಿ ಮುಷ್ತಾಕ್ ಹೆನ್ನಾಬೈಲ್, ಝಮೀರ್ ಅಹ್ಮದ್ ರಶಾದಿ, ಇಬ್ರಾಹಿಂ ಸಾಹೇಬ್ ಕೋಟ, ಮುಹಮ್ಮದ್ ಇರ್ಫಾನಿ, ನಜೀರ್ ಬೆಳವಾಯಿ, ಅಶ್ರಫ್ ಕುಂದಾಪುರ, ಇಕ್ಬಾಲ್ ಹಾಲಾಡಿ, ರಫೀಕ್ ನಾಗೂರು, ಅಬ್ದುಲ್ ರೌಫ್, ತೌಫೀಕ್ ಗಂಗೊಳ್ಳಿ, ಅಸ್ಲಮ್ ಹೈಕಾಡಿ, ಉಸ್ಮಾನ್ ಹೈಕಾಡಿ, ಆರ್.ಎ.ಲೋಹಾನಿ, ಮುಹಮ್ಮದ್ ಮುಹಸೀನ್ ಇದ್ದರು.

Join Whatsapp