ಉಡುಪಿ: ಬಟ್ಟೆಯಂಗಡಿಯಲ್ಲಿ ಮಿಸ್ ಫೈರಿಂಗ್; ಓರ್ವನ ಸ್ಥಿತಿ ಗಂಭೀರ

Prasthutha|

ಉಡುಪಿ: ನಗರದ ಬನ್ನಂಜೆಯಲ್ಲಿರುವ ಪ್ರಸಿದ್ಧ ವಸ್ತ್ರ ಮಳಿಗೆ ಜಯಲಕ್ಷ್ಮೀ ಸಿಲ್ಕ್ ನಲ್ಲಿ ಮಿಸ್ ಫೈರಿಂಗ್ ಆಗಿ ಓರ್ವ ವ್ಯಕ್ತಿಗೆ ಗುಂಡು ತಗುಲಿದೆ.

- Advertisement -

ಗುಂಡೇಟು ತಗುಲಿದ ಗಾಯಾಳುವನ್ನು ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್ ಪತ್ತೆಯಾಗಿತ್ತು. ಬಳಿಕ ಗನ್ ಎತ್ತಿಕೊಂಡು ಆಪರೇಟ್ ಮಾಡಿ ಪರೀಕ್ಷಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡೇಟು ತಗುಲಿದೆ.

Join Whatsapp