ಉಡುಪಿ ಹತ್ಯಾಕಾಂಡ: ಸಂತಾಪ ಸಭೆಯಲ್ಲಿ ಕಂಬನಿ ಮಿಡಿದ ಸಾವಿರಾರು ಮಂದಿ

Prasthutha|

ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಬುಧವಾರ ನಡೆದ ಸಂತ್ರಸ್ತರ ಸಂತಾಪ ಸಭೆಯಲ್ಲಿ ಸಾವಿರಾರು ಮಂದಿ ಕಂಬನಿ ಮಿಡಿದರು.

- Advertisement -


ಸಂತ್ರಸ್ತ ಕುಟುಂಬದ ನೂರ್ ಮಹಮ್ಮದ್ ಮಾತನಾಡಿ, ನನಗೆ ಏನೂ ಮಾತನಾಡಲು ಪದಗಳೇ ಬರುತಿಲ್ಲ. ನಿಮ್ಮ ಎಲ್ಲರ ಸಹನೆ, ತಾಳ್ಮೆ ನನ್ನಲ್ಲಿ ಇದೆ. ನಾನು ಮೊದಲು ಎನಿಸಿದ್ದು ನನಗೆ ನನ್ನ ಕುಟುಂಬ ಮಾತ್ರ ಇರುವುದು ಎಂದು, ಈಗ ನೋಡುವಾಗ ಇಡೀ ಸಮಾಜವೇ ನನ್ನ ಕುಟುಂಬ ಆಗಿದೆ. ಇದುವೇ ನನಗೆ ದೊಡ್ಡ ಶಕ್ತಿ ನನ್ನ ಪರಿಸ್ಥಿತಿ ಇನ್ನು ಮುಂದೆ ಯಾರಿಗೂ ಬರಬಾರದು ಮತ್ತು ಯಾವುದೇ ಮನೆಯಲ್ಲೂ ಈ ರೀತಿ ಆಗಬಾರದು ಎಂದರು.


ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಯಾಸೀನ್ ಮಲ್ಪೆ ಮಾತನಾಡಿ, ಕಳೆದ 2-3 ವರ್ಷಗಳಲ್ಲಿ ನಮ್ಮ ಉಡುಪಿ ಬೇರೆ ಬೇರೆ ಕಾರಣಗಳಿಗಾಗಿ ಇಡೀ ದೇಶ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ಸುದ್ದಿ ಮಾಡಿತ್ತು. ನಮ್ಮ ಮಾಧ್ಯಮಗಳು ನಮ್ಮ ಜಿಲ್ಲೆಯ ಕುರಿತ ಬಿಸಿ ಬಿಸಿ ಸುದ್ದಿಗಳನ್ನು ಪ್ರಸಾರ ಮಾಡಿದವು. ಈಗ ಮತ್ತೊಮ್ಮೆ ಉಡುಪಿ ಸುದ್ದಿಯಲ್ಲಿದೆ, ಈಗ ನಡೆದಿರುವ ಘಟನೆ ಉಡುಪಿ ಜಿಲ್ಲೆಯ ಇತಿಹಾಸದಲ್ಲಿಯೇ ಎಂದೂ ಕಂಡು ಕೇಳರಿಯದ ಘಟನೆ. ಈ ಘಟನೆ ಗೆ ನಮ್ಮ ಇಡೀ ಉಡುಪಿ ಬೆಚ್ಚಿ ಬಿದ್ದಿದೆ. ಜಾತಿ ಧರ್ಮದ ಭೇದ ಇಲ್ಲದೇ ಪ್ರತಿಯೊಬ್ಬರೂ ಈ ಘಟನೆಯ ಬಗ್ಗೆ ಕಂಬನಿ ಮಿಡಿದಿದ್ದಾರೆ ಎಂದರು.

- Advertisement -


ನೇಜಾರುವಿನಲ್ಲಿ ನಡೆದ ಒಂದೆ ಕುಟುಂಬದ ನಾಲ್ವರ ಹತ್ಯಾ ಪ್ರಕರಣವನ್ನು ಅತ್ಯಂತ ಸಹನೆ ಮತ್ತು ಸಂಯಮದಿಂದ ನಿರ್ವಹಿಸಿ, ಇಡೀ ಸಮಾಜಕ್ಕೆ ಮಾದರಿಯಾದ ನನ್ನ ಎಲ್ಲಾ ಮುಸ್ಲಿಂ ಬಂಧುಗಳಿಗೂ ನಾನು ಚಿರರುಣಿ ಎಂದು ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಫಾದರ್ ರೋಕ್ ಡಿಸೋಜಾ ಹೇಳಿದರು.

Join Whatsapp