ಉಡುಪಿ ಹತ್ಯಾಕಾಂಡ: ಕೆಲ ತಿಂಗಳ ಹಿಂದೆ 18 ಲಕ್ಷದ ಕಾರು ಖರೀದಿಸಿದ್ದ ಆರೋಪಿ ಪ್ರವೀಣ್..!

Prasthutha|

►ಕೊಲೆಗೆ ಪ್ರವೀಣ್’ನಿಂದ ಮಾಸ್ಟರ್ ಪ್ಲ್ಯಾನ್..!

- Advertisement -


ಉಡುಪಿ: ನೇಜಾರಿನಲ್ಲಿ ತಾಯಿ, ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕೊಲೆ ಆರೋಪಿ ಪ್ರವೀಣ್ ಚೌಗುಲೆ 8 ತಿಂಗಳ ಹಿಂದೆ 18 ಲಕ್ಷ ರೂ. ಮೌಲ್ಯದ ಹೊಸ ಕಾರು ಖರೀದಿಸಿದ್ದ ಎಂದು ವರದಿಯಾಗಿದೆ.


ಚೌಗುಲೆ ಐಷರಾಮಿ ಜೀವನ ನಡೆಸುತ್ತಿದ್ದ. ಈತನ ವೇತನದಿಂದ ಇಷ್ಟೆಲ್ಲ ಮಾಡಲು ಸಾಧ್ಯವೇ ಎಂಬುವುದು ಇದೀಗ ಇರುವ ಅನುಮಾನ. ಮಂಗಳೂರಿನ ಕೆಪಿಟಿ ಬಳಿ ಫ್ಲ್ಯಾಟ್, ಎರಡು ನಿವೇಶನ, ಸುರತ್ಕಲ್ ನಲ್ಲಿ ಸ್ವಂತ ಮನೆ ಸೇರಿ ಅಪಾರ ಆಸ್ತಿ ಪಾಸ್ತಿ ಈತನಿಗೆ ಇದೆ ಎಂದು ವರದಿಯಾಗಿದೆ.
ಮಾದಕವಸ್ತು, ಅಕ್ರಮ ಚಿನ್ನ ಸಾಗಾಟದ ನಂಟೇನಾದರೂ ಈತನಿಗೆ ಇದೆಯೇ ಎಂಬುವುದು ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಿದೆ.

- Advertisement -


ಪ್ರವೀಣ್ ಯೋಜಿತವಾಗಿ ಈ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಯಾವುದೇ ಸಾಕ್ಷ್ಯಾಧಾರ ಮತ್ತು ತನ್ನ ಮುಖ ಪರಿಚಯ ಸಿಗಬಾರದೆಂಬ ಉದ್ದೇಶದಿಂದ ಪ್ರವೀಣ್ ಚೌಗುಲೆ ಈ ಪೂರ್ವ ಯೋಜಿತ ಕೊಲೆಗಾಗಿ ತನ್ನ ಕಾರು, ಮಾಸ್ಕ್, ಹಲವು ರಿಕ್ಷಾ, ಬೈಕ್, ಬಸ್ ಗಳನ್ನು ಬಳಸಿದ್ದನು. ಅದೇ ರೀತಿ ಬ್ಯಾಗ್ ಮತ್ತು ಬ್ಯಾಗ್ ಒಳಗೆ ಹರಿತವಾದ ಚೂರಿ ಹಾಗೂ ಬಟ್ಟೆಗಳನ್ನು ಇಟ್ಟು ಕೊಂಡಿದ್ದನು.
ಕೃತ್ಯ ಎಸಗಿ ತನ್ನ ಮನೆಗೆ ಹೋದ ಆರೋಪಿ ಪ್ರವೀಣ್, ಮನೆಯಲ್ಲಿ ತನ್ನ ಎಲ್ಲ ರಕ್ತದ ಕಲೆಗಳನ್ನು ಶುಚಿಗೊಳಿಸಿದನು. ಸುಮಾರು 10 ನಿಮಿಷಗಳ ಕಾಲ ಮನೆಯಲ್ಲಿದ್ದು, ಬಳಿಕ ಕೃತ್ಯ ಎಸಗಿದ ವೇಳೆ ಗಾಯಗೊಂಡ ಕೈಯಲ್ಲಿನ ಬೆರಳಿಗೆ ಚಿಕಿತ್ಸೆ ಪಡೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗಿದ್ದ ಎನ್ನಲಾಗಿದೆ.


ಮೃತ ಐನಾಝ್ ವಿಚಾರದಲ್ಲಿ ಆರೋಪಿ ಪ್ರವೀಣ್ ಚೌಗುಲೆ ಬಹಳ ಪಾಸೆಸಿವ್ ಆಗಿದ್ದನು. ಐನಾಝ್ ನನ್ನ ನಿಯಂತ್ರಣದಲ್ಲಿರಬೇಕು ಎಂಬ ವಿಚಿತ್ರ ಮನಸ್ಥಿತಿ ಹೊಂದಿದ್ದನು. ಹೀಗಾಗಿ ಅಸೂಯೆ ಮತ್ತು ದ್ವೇಷದಿಂದ ಕೊಲೆ ಮಾಡಲು ನಿರ್ಧರಿಸಿದ್ದನು ಎಂದು ತಿಳಿದು ಬಂದಿದೆ.


ಆರೋಪಿ ಪ್ರವೀಣ್ ಅರುಣ್ ಚೌಗಲೆ ಈಗಾಗಲೇ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿರುವುದಾಗಿ ತಿಳಿದು ಬಂದಿದೆ. ಸದ್ಯ ಆಕೆ ಹಿಂದೂ ಹೆಸರಿನಲ್ಲಿ ಗುರುತಿಸಿಕೊಂಡಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರವೀಣ್ ಚೌಗಲೆ ಕುಟುಂಬ ಮಂಗಳೂರಿನಲ್ಲಿ ವಾಸ ಇದೆ ಎಂದು ಪೊಲೀಸರ ಮಾಹಿತಿ ಆಧರಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಆರೋಪಿ ಅರುಣ್ ಚೌಗುಲೆ ಅನುಮಾನದ ದೃಷ್ಟಿಯುಳ್ಳವನು ಎಂದು ವರದಿಯಾಗಿದೆ. ಮನೆಯಲ್ಲಿ ಏನೇ ವಸ್ತು ಖಾಲಿಯಾದರೂ ಅದನ್ನು ತಗೊಂಡು ಬರುವ ಸ್ವಾತಂತ್ರ್ಯ ಪತ್ನಿಗೆ ಇರಲಿಲ್ಲ ಎಂದು ವರದಿಯಾಗಿದೆ. ಪತಿಯ ಹಿಂಸೆಗೆ ಏನೂ ಹೇಳದೆ ಪತ್ನಿ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಸಣ್ಣಪುಟ್ಟ ವಿಚಾರಕ್ಕೆ ಅನುಮಾನ ಪಡುತ್ತಿದ್ದ ಚೌಗುಲೆ ಎರಡು ಬಾರಿ ತನ್ನ ಪತ್ನಿಯ ಕೊಲೆ ಮಾಡಲು ಮುಂದಾಗಿದ್ದ ಎಂದು ವರದಿಯಾಗಿದೆ.

Join Whatsapp