ಪಡುಬಿದ್ರಿ: ಟೂತ್ ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಿಂದ ಹಲ್ಲು ಉಜ್ಜಿದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇನ್ನಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ವೆಂಕಪ್ಪ (53) ಎಂದು ಗುರುತಿಸಲಾಗಿದೆ.
ಇವರು ನ.1ರಂದು ಬೆಳಗ್ಗೆ ಬಚ್ಚಲು ಮನೆಯಲ್ಲಿ ಟೂತ್ ಪೇಸ್ಟ್ ಎಂದು ಭಾವಿಸಿ ಅಲ್ಲಿಯೇ ಇದ್ದ ಇಲಿ ಪಾಷಾಣವನ್ನು ಬಳಸಿ ಹಲ್ಲು ಉಜ್ಜಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಇವರು, ನ.6ರಂದು ಸಂಜೆ ವೇಳೆ ಮುಕ್ಕಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟರು