ಉಡುಪಿ: ಎರಡು ತಿಂಗಳಿನಿಂದ ಪೂರೈಕೆಯಾಗದ ಸೀಮೆಎಣ್ಣೆ| ನಾಡದೋಣಿ ಮೀನುಗಾರರು ಕಂಗಾಲು

Prasthutha|

ಮಲ್ಪೆ: ಕಳೆದ ಎರಡು ತಿಂಗಳಿನಿಂದ ಸೀಮೆಎಣ್ಣೆ ಪೂರೈಕೆಯಾಗದ ಕಾರಣ ನಾಡದೋಣಿ ಮೀನುಗಾರರು ಕಂಗಾಲಾಗಿದ್ದಾರೆ.

- Advertisement -

ಸಾಂಪ್ರದಾಯಿಕ ಯಾಂತ್ರೀಕೃತ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆಯಾಗದ ಕಾರಣ ಮೂರು ಜಿಲ್ಲೆಗಳ ಬಹುತೇಕ ನಾಡದೋಣಿಗಳು ಲಂಗರು ಹಾಕಿವೆ.

ಮೀನುಗಾರಿಕೆ ಋತು ಆರಂಭಗೊಂಡ ಬಳಿಕ ಇಲ್ಲಿಯವರೆಗೆ ಒಬ್ಬ ಪರವಾನಿಗೆದಾರರಿಗೆ ತಲಾ ಸರಾಸರಿ 169 ಲೀ.ನಿಂದ 280 ಲೀ.ಗಳಷ್ಟೇ ದೊರಕಿದೆ. 2 ತಿಂಗಳುಗಳಿಂದ ಪೂರೈಕೆಯೇ ಇಲ್ಲದ ಕಾರಣ ದುಡಿ ಯುವ ಅವಧಿಯಲ್ಲಿ ನಾಡದೋಣಿಗಳು ಲಂಗರು ಹಾಕಬೇಕಾಗಿದೆ.

- Advertisement -

ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಕೆಲವೊಂದು ನಾಡದೋಣಿಗಳು ಈ ಹಿಂದೆ ದಾಸ್ತಾನು ಇರಿಸಲಾಗಿದ್ದ ಸೀಮೆಎಣ್ಣೆ ಬಳಸಿಕೊಂಡು ಮೀನುಗಾರಿಕೆ ಮಾಡಿದರೆ, ಹೆಚ್ಚಿನ ನಾಡದೋಣಿಗಳು ಬಂದರಿನಲ್ಲೇ ಉಳಿದಿವೆ.

ಮೇ ತಿಂಗಳಲ್ಲಿ ಮೀನುಗಾರಿಕೆ ಕೊನೆಗೊಳ್ಳಲಿದ್ದು, ಅದನ್ನೇ ನಂಬಿ ಬದುಕುತ್ತಿರುವ ನಮಗೆ ದಿಕ್ಕು ತೋಚದಂತಾಗಿದೆ ಎಂದು ಮೀನುಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.

2022-23ರ ಎಪ್ರಿಲ್‌ನಲ್ಲಿ ಸೀಮೆಎಣ್ಣೆ ಪೂರೈಕೆಯನ್ನು 150 ಲೀ.ನಿಂದ 300 ಲೀ.ಗೆ ಹೆಚ್ಚಿಸಲು ಮೀನುಗಾರಿಕೆ ಇಲಾಖೆ ಸಮ್ಮತಿಸಿತ್ತು. ಆದರೆ ಕೆಲವರು
ಗರಿಷ್ಠ 280 ಲೀ. ಪಡೆದುಕೊಂಡರೆ ಹಲವರಿಗೆ 169 ಲೀ. ಮಾತ್ರ ಲಭಿಸಿದೆ. ಮಾರ್ಚ್‌ನಿಂದ ಸಿಗದ ಕಾರಣಕ್ಕೆ ಮೀನುಗಾರಿಕೆ ನಡೆಸಲಾಗದೆ ನಮ್ಮ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಸರಕಾರ ಆದಷ್ಟು ಬೇಗ ಸೀಮೆಎಣ್ಣೆ ಬಿಡುಗಡೆ ಗೊಳಿಸಬೇಕು ಎಂದು ಸಾಂಪ್ರದಾಯಿಕ ಯಾಂತ್ರೀಕೃತ ನಾಡದೋಣಿ ಮೀನು ಗಾರರು ಆಗ್ರಹಿಸಿದ್ದಾರೆ.

Join Whatsapp