ಉಡುಪಿ: ಮೂರನೇ ಬಾರಿ ಎದುರಾಳಿಯಾಗುತ್ತಿರುವ ಹೆಗ್ಡೆ ಮತ್ತು ಕೋಟ

Prasthutha|

ಉಡುಪಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮೂರನೇ ಪಟ್ಟಿ ಪ್ರಕಟಿಸಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಸಚಿವ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾಗಿದ್ದಾರೆ. ಈ ಮೂಲಕ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಹೆಗ್ಡೆ ಮೂರನೇ ಬಾರಿಗೆ ಪರಸ್ಪರ ಸ್ಪರ್ಧಿಸುತ್ತಿದ್ದಾರೆ.

- Advertisement -

ಕ್ಷೇತ್ರ ಮರುವಿಂಗಡಣೆ ವೇಳೆ ಹಚ್ಚಿ ಹೋಗಿದ್ದ ಹಿಂದಿನ ಬ್ರಹ್ಮಾವರ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಜಯಪ್ರಕಾಶ್ ಹೆಗ್ಡೆ ಎರಡು ಬಾರಿ ಪರಸ್ಪರ ಸ್ಪರ್ಧಿಸಿದ್ದರು. ಎರಡೂ ಬಾರಿತೂ ಹೆಗ್ಡೆ ಜಯ ಸಾಧಿಸಿದ್ದರು.

1999 ಮತ್ತು 2004ರಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕೋಟ ವಿರುದ್ಧ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದರು. ಎರಡೂ ಬಾರಿ ಕೋಟ ಶ್ರೀನಿವಾಸ್ ಪೂಜಾರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿತ್ತು.

- Advertisement -

1999 ರಲ್ಲಿ ಹೆಗ್ಡೆ 32429 ಮತಗಳನ್ನು ಪಡೆದು ಜಯಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸರಳಾ ಬಿ ಕಾಂಚನ್ 27666 ಮತ, ಕೋಟ ಶ್ರೀನಿವಾಸ್ ಪೂಜಾರಿ 24043 ಮತಗಳನ್ನು ಪಡೆದಿದ್ದರು.

2004 ರಲ್ಲಿ ಹೆಗ್ಡೆ 39521ಮತಗಳನ್ನು ಪಡೆದು ಜಯಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 27348 ಮತ, ಕೋಟ ಶ್ರೀನಿವಾಸ್ ಪೂಜಾರಿ 25590 ಮತಗಳನ್ನು ಪಡೆದಿದ್ದರು.

20 ವರ್ಷಗಳ ಬಳಿ ಮತ್ತೆ ಕರಾವಳಿಯ ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ರಾಜಕಾರಣಿಗಳಿಬ್ಬರು ಲೋಕ ಸಭಾ ಚುನಾವಣೆಗೆ ಪರಸ್ಪರ ಸ್ಪರ್ಧಿಸುತ್ತಿದ್ದಾರೆ.

ಮಾರ್ಚ್ 21: 1952ರಲ್ಲಿ ದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಸಂದರ್ಭ ಚಿಕ್ಕಮಗಳೂರು ಜಿಲ್ಲೆ ಹಾಸನ ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟಿತ್ತು. 1967ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ಹಾಸನ ಕ್ಷೇತ್ರದಿಂದ ಬೇರ್ಪಟ್ಟು ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ವಿಂಗಡಣೆಯಾಯಿತು.2009ರಲ್ಲಿ ಮತ್ತೆ ನಡೆದ ಕ್ಷೇತ್ರಪುನರ್ವಿಂಗಡಣೆಯಲ್ಲಿ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ಕ್ಷೇತ್ರದ ಉದಯವಾಗಿದ್ದು, ಸದ್ಯ ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ತಲಾ 4 ವಿಧಾನಸಭೆ ಕ್ಷೇತ್ರಗಳು ಸೇರಿ ಒಂದು ಲೋಕಸಭೆ ಕ್ಷೇತ್ರವಾಗಿ ಈ ಕ್ಷೇತ್ರ ಹೊರಹೊಮ್ಮಿದೆ.

ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರದ ಹಾಲಿ ಸಂಸದರಾಗಿದ್ದು, 2014ರ ಚುನಾವಣೆಯಲ್ಲಿ ಈ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿದ್ದ ಶೋಭಾ ಕರಂದ್ಲಾಜೆ 2019ರ ಚುನಾವಣೆಯಲ್ಲೂ ಮರು ಆಯ್ಕೆಯಾಗುವ ಮೂಲಕ ಎರಡನೇ ಬಾರಿಗೆ ಸಂಸದೆಯಾಗಿದ್ದಾರೆ. ಮೂರನೇ ಬಾರಿಗೆ ಅವರೇ ಬಿಜೆಪಿ ಅಭ್ಯರ್ಥಿಯಾಗಲು ಬಯಸಿದ್ದರೂ ಪಕ್ಷದ ಕಾರ್ಯಕರ್ತರ ತೀವ್ರ ವಿರೋಧಕ್ಕೆ ಮಣಿದ ಬಿಜೆಪಿ ಹೈಕಮಾಂಡ್ ಕೋಟ ಶ್ರೀನಿವಾಸ್ ಪೂಜಾರಿಗೆ ಟಿಕೆಟ್ ನೀಡಿದೆ.

Join Whatsapp