ಉಡುಪಿ: ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ

Prasthutha|

ಉಡುಪಿ: ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ಮಂಗಳವಾರ ಮಧ್ಯಾಹ್ನ ವೇಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

- Advertisement -

ನಾಪತ್ತೆಯಾದ ವಿದ್ಯಾರ್ಥಿಗಳನ್ನು ಬಿಹಾರ ಮೂಲದ ತಬಾರಕ್, ಜಂಶೀದ್, ತಂಝೀರ್ ಆಲಮ್, ಶಾಹಿಲ್ ಎಂದು ಗುರುತಿಸಲಾಗಿದೆ.

ಮದ್ರಸ ಶಿಕ್ಷಣ ಕಲಿಯುತ್ತಿದ್ದ ಇವರು, ಮಂಗಳವಾರ ಮಧ್ಯಾಹ್ನ ವೇಳೆ ಮದ್ರಸದಿಂದ ಹೊರಗಡೆ ಹೋದವರು ಈವರೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ.



Join Whatsapp