ಉಡುಪಿ: ಹೊತ್ತಿ ಉರಿದ ಫರ್ನಿಚರ್ ಶಾಪ್; ಲಕ್ಷಾಂತರ ರೂ. ನಷ್ಟ

Prasthutha|

ಉಡುಪಿ: ಉಡುಪಿಯ ಫರ್ನಿಚರ್ ಶೋರೂಂನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು ಭಸ್ಮವಾಗಿವೆ.ಮಣಿಪಾಲ ಲಕ್ಷ್ಮೀನಗರ ಬಳಿ ಇರುವ ಸುಧಾ ಫರ್ನಿಚರ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು 40 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.

- Advertisement -

ಫರ್ನಿಚರ್ ಮಳಿಗೆಗೆ ಹೊತ್ತಕೊಂಡ ಬೆಂಕಿ ಕ್ರಮೇಣ ಬೆಂಕಿ ಇಡೀ ಕಟ್ಟಡವನ್ನು ಅವರಿಸಿ ಹತ್ತಿರದ ರೆಸ್ಟೋರೆಂಟ್ ಗೆ ಹರಡಿದೆ. ಮಳಿಗೆಯಲ್ಲಿದ್ದ ಹಾಸಿಗೆಗಳು, ಸೋಫಾಗಳು ಮತ್ತು ಇತರ ಪೀಠೋಪಕರಣಗಳ ವಸ್ತುಗಳಿಗೆ ಬೆಂಕಿ ಹರಡಿ ನಾಶವಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಸಾಧ್ಯತೆಗಳಿದ್ದು, ಅಗ್ನಿಶಾಮಕ ಸಿಬ್ಬಂದಿಯ ತಂಡವು ಸ್ಥಳಕ್ಕೆ ಧಾವಿಸಿ ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.

Join Whatsapp