ಉಡುಪಿ: ಅಲ್-ಇಬಾದ ಇಂಡಿಯನ್ ಸ್ಕೂಲ್ ಗೆ ಸಿಬಿಎಸ್ ಇ ಮಾನ್ಯತೆ

Prasthutha|

ಉಡುಪಿಯ ಪೆರಪಂಳ್ಳಿಯಲ್ಲಿ ಮುನ್ನಡೆಯುತ್ತಿರುವ ಪ್ರತಿಷ್ಠಿತ ಅಲ್-ಇಬಾದ ಇಂಡಿಯನ್ ಸ್ಕೂಲ್ ಇದೀಗ ಭಾರತ ಸರಕಾರದಿಂದ ಸಿಬಿಎಸ್ಇ ಮಾನ್ಯತೆ ಪಡೆದುಕೊಂಡಿದೆ.

- Advertisement -

ಹಮ್ಮದ್ ಬಶೀರ್ ಇದಿನಬ್ಬ ಮತ್ತು ಅಬ್ದುಲ್ ಲತೀಫ್ ಮದನಿ 2013ರಲ್ಲಿ ಅಲ್-ಇಬಾದ ಇಂಡಿಯನ್ ಸ್ಕೂಲ್ ಅನ್ನು ಸ್ಥಾಪಿಸಿದರು. ಝೈದ್ ಅಕಾಡೆಮಿಯ ಅಧ್ಯಕ್ಷರಾಗಿ ಹಮ್ಮದ್ ಬಶೀರ್ ಇದಿನಬ್ಬ ಹಾಗೂ ಕಾರ್ಯದರ್ಶಿ ಮತ್ತು ಆಡಳಿತ ನಿರ್ದೇಶಕರಾಗಿ ಅಬ್ದುಲ್ ಲತೀಫ್ ಮದನಿ, ಪ್ರಾಂಶುಪಾಲರಾಗಿ ಜುವೇರಿಯಾ ಹಯಾತ್ ಕಾರ್ಯನಿರ್ವಹಿಸುತ್ತಿದ್ದಾರೆ.


ನಮ್ಮ ಶಾಲೆಯಲ್ಲಿರುವ ಎಲ್ಲ ರೀತಿಯ ಆಧುನಿಕ ಸೌಲಭ್ಯ, ತಂತ್ರಜ್ಞಾನ, ತರಗತಿ, ಆಟದ ಮೈದಾನ, ಮಕ್ಕಳ ಶಿಕ್ಷಣ, ಶಿಕ್ಷಕ ವೃಂದ ಮತ್ತು ಶಿಕ್ಷಕೇತರ ವೃಂದ, ಕಟ್ಟಡ ವಿನ್ಯಾಸಗಳ ಆಧಾರದಲ್ಲಿ ಸಿಬಿಎಸ್ಸಿ ಮಾನ್ಯತೆಯನ್ನು ಭಾರತ ಸರಕಾರ ನೀಡಿದೆ. ಇದು ನಮ್ಮ ಸಂಸ್ಥೆಯ ಬಹಳ ದೊಡ್ಡ ಸಾಧನೆಯಾಗಿದೆ ಎಂದು ಅಬ್ದುಲ್ ಲತೀಫ್ ಮದನಿ ತಿಳಿಸಿದ್ದಾರೆ.



Join Whatsapp