ಚಾಕಲೇಟ್ ನುಂಗಿ ಬಾಲಕಿ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಿಜಾಂಶ ಬಹಿರಂಗ

Prasthutha|

- Advertisement -

ಉಡುಪಿ: ಬೈಂದೂರು ನಲ್ಲಿ ಚಾಕಲೇಟ್ ನುಂಗಿ ಬಾಲಕಿ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಾಲಕಿಯ ಸಾವಿಗೆ ಚಾಕಲೇಟ್ ಕಾರಣ ಅಲ್ಲ, ಹುಟ್ಟಿನಿಂದಲೇ ಆಕೆಗೆ ಹೃದಯ ಸಂಬಂಧಿ ಸಮಸ್ಯೆಯಿತ್ತು ಎಂದು ವೈದ್ಯಕೀಯ ವರದಿಯಲ್ಲಿ ನಿಜಾಂಶ ಹೊರಬಿದ್ದಿದೆ.

ಜುಲೈ 20 ರಂದು ಬಾಲಕಿ ಸಮನ್ವಿ (6) ಶಾಲೆಗೆ ಹೋಗಲ್ಲ ಎಂದಿದ್ದಕ್ಕೆ ತಾಯಿ ಚಾಕಲೇಟ್ ಕೊಟ್ಟಿದ್ದಾರೆ‌.
ಚಾಕಲೇಟ್ ಬಾಯಲ್ಲಿದ್ದಂತೆ ಶಾಲೆಯ ಬಸ್ ಬಂದ ಕಾರಣ ತಾಯಿ ಸಮನ್ವಿಯನ್ನು ಎತ್ತಿಕೊಂಡು ಬಸ್ ಬಳಿ ಬಂದಿದ್ದಾರೆ. ಬಸ್ ಬಳಿ ಬರುತ್ತಲೇ ಬಾಲಕಿ ಕುಸಿದು ಬಿದ್ದಿದ್ದಾಳೆ.

- Advertisement -

ಬಳಿಕ ಸಮನ್ವಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಳು. ಆದರೆ ಇದೀಗ ಸಾವಿಗೆ ಚಾಕಲೇಟ್ ಕಾರಣ ಅಲ್ಲ ಎಂದು ದೃಢವಾಗಿದೆ.

Join Whatsapp