ಉಡುಪಿ: ಬೃಹತ್‌ ಗಾತ್ರದ ಹೆಬ್ಬಾವನ್ನು ಹಿಡಿದ ಬಾಲಕ..!

Prasthutha|

ಉಡುಪಿ: 12 ವರ್ಷದ ಬಾಲಕನೋರ್ವ ಅತ್ಯಂತ ದೊಡ್ಡದಾದ ಹೆಬ್ಬಾವಿನ ತಲೆಗೇ ಕೈಹಾಕಿ ಹಿಡಿದಿರುವ ಘಟನೆ ಉಡುಪಿ ತಾಲೂಕಿನ ಸಾಲಿಗ್ರಾಮ ದೇವಾಡಿಗರಬೆಟ್ಟು ಗ್ರಾಮದಲ್ಲಿ ನಡೆದಿದೆ.

- Advertisement -

ಹೆಬ್ಬಾವನ್ನು ಹಿಡಿದ ಬಾಲಕನ ಹೆಸರು ಧೀರಜ್‌ ಐತಾಳ್‌. ಅವನ ತಂದೆ ಬೇರೆ ಯಾರೂ ಅಲ್ಲ, ಉಡುಪಿ ಭಾಗದ ಖ್ಯಾತ ಉರಗ ತಜ್ಞ ಸುಧೀಂದ್ರ ಐತಾಳ್‌.

ಪುಟ್ಟ ಬಾಲಕನ ಈ ಸಾಹಸದ ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗಿದ್ದ ಜನರ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

- Advertisement -

ಸಾಲಿಗ್ರಾಮ ದೇವಾಡಿಗರಬೆಟ್ಟು ಗ್ರಾಮದಲ್ಲಿ ಹೆಬ್ಬಾವೊಂದು ಬಂದಿದೆ ಎಂಬ ಮಾಹಿತಿ ಪಡೆದ ಧೀರಜ್‌ ತನ್ನ ತಂದೆಯೊಂದಿಗೆ ಅಲ್ಲಿಗೆ ಹೋಗಿದ್ದ. ಪೊದೆಯಲ್ಲಿ ಅಡಗಿಕೊಂಡಿದ್ದ ಹಾವನ್ನು ಅಪ್ಪ ಬಾಲದಲ್ಲಿ ಹಿಡಿದರೆ ಮಗ ತಲೆಗೇ ಕೈ ಹಾಕಿ ದರದರನೆ ಎಳೆದುಕೊಂಡು ಬಂದಿದ್ದಾನೆ.

Join Whatsapp