ಉಡುಪಿ: ಗಾಂಜಾ ಮಾರಾಟ ಯತ್ನ; ಮೂವರ ಬಂಧನ

Prasthutha|

ಶಿರ್ವ: ಇಲ್ಲಿನ ಕುರ್ಕಾಲು ಗ್ರಾಮದ ಬಗ್ಗೇಡಿಕಲ್ಲು ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಶಿರ್ವ ಪೊಲೀಸರು ಸೆ. 9 ರಂದು ಬಂಧಿಸಿದ್ದಾರೆ.

- Advertisement -

ಶಿರ್ವ ಠಾಣೆಯ ಪಿಎಸ್‌ಐ ಶಕ್ತಿವೇಲು ಇ. ಅವರು ಶನಿವಾರ ಬೆಳಗ್ಗೆ ರೌಂಡ್ಸ್‌ ನಲ್ಲಿದ್ದಾಗ ಕುರ್ಕಾಲು ಬಗ್ಗೇಡಿಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರೇಮನಾಥ್‌ ರೇವ್‌ (22), ಸಂಪತ್‌ ಬಂಗೇರ (25) ಮತ್ತು ವರುಣ್‌ (19) ಅವರನ್ನು ಬಂಧಿಸಲಾಗಿದೆ.

ಆಪಾದಿತ ಪ್ರೇಮನಾಥನ ಬಳಿ ವಶದಲ್ಲಿದ್ದ ಸುಮಾರು 6 ಸಾವಿರ ರೂ. ಮೌಲ್ಯದ 212 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp