ಉಡುಪಿ: ಬ್ರಹ್ಮಾವರದ ಸಾಸ್ತಾನ ನಿವಾಸಿಯಾಗಿದ್ದ ಪಿ.ಯಶೋಧಾ ನಾರಾಯಣ ಉಪಾಧ್ಯ (83) ಅವರು ಮನೆಯಲ್ಲಿ ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.
ಚುನಾವಣಾ ಆಯೋಗ ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಹೀಗಾಗಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ ಪಿ.ಯಶೋಧಾ ಅವರು ಮನೆಯಲ್ಲೆ ಮತದಾನ ಮಾಡಿದರು.
ಮತದಾನದ ದಿನ ಪಿ.ಯಶೋಧಾ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿ ಆಸ್ಪತ್ರೆ ತೆರಳಲು ಪಿ.ಯಶೋಧಾ ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕ ಪಿ.ಯಶೋಧಾ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕ್ಸತ್ಸೆ ಫಲಕಾರಿಯಾಗದೆ ಪಿ.ಯಶೋಧಾ ಅವರು ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.