ಉಡುಪಿ: ಬೈಕ್ ನ ಹೆಡ್ ಲೈಟ್ ವೈಸರ್ ನಲ್ಲಿ ಹಾವು ಪ್ರತ್ಯಕ್ಷ..!

Prasthutha|

ಉಡುಪಿ: ನಡು ರಸ್ತೆಯಲ್ಲಿ ಬೈಕ್ ನ ಹೆಡ್ ಲೈಟ್ ವೈಸರ್ನಲ್ಲಿ ಹಾವು ಪ್ರತ್ಯಕ್ಷವಾಗಿದೆ.

- Advertisement -


ಉಡುಪಿಯ ಕಿನ್ನಿ ಮುಲ್ಕಿ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಬೈಕ್ ನಿಲ್ಲಿಸಿ ಯುವಕ ಕೆಲಸಕ್ಕೆ ತೆರಳಿದ್ದ. ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಬೈಕ್ ಏರಿದ ಯುವಕ ಬೈಕ್ ಸ್ಟಾರ್ಟ್ ಮಾಡಿ ಹೊರಡಬೇಕು ಎನ್ನುವಾಗ ವೈಸರ್ ಒಳಗೆ ಹಾವು ಪ್ರತ್ಯಕ್ಷವಾಗಿದೆ.


ಹೆಡ್ ಲೈಟ್ ವೈಸರ್ ನಲ್ಲಿ ಹಾವು ನೋಡಿ ಬೆಚ್ಚಿಬಿದ್ದ ಯುವಕ ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ, ಹಾವಿನ ಬಗ್ಗೆ ತಿಳಿಸಿದ್ದು ಉರಗ ರಕ್ಷಕ ಪ್ರಾಣೇಶ್ ಮೂಲಕ ಕಾರ್ಯಾಚರಣೆ ನಡೆದಿದೆ. ಪ್ರಾಣೇಶ್ ಹಾವಿನ ರಕ್ಷಣೆ ಮಾಡಿದ್ದು ಕೆಲವು ದಿನಗಳ ಹಿಂದೆ ಅಷ್ಟೇ, ಮೊಟ್ಟೆಯಿಂದ ಹೊರಬಂದಿದ್ದ ಹೆಬ್ಬಾವು ಮರಿ ಇದಾಗಿದೆ. ಮಳೆಗಾಲದ ಸಮಯದಲ್ಲಿ ಬಿಸಿ ಜಾಗ ಹುಡುಕಿ ಬೈಕ್ ಹೆಡ್ ವೈಸರ್ ಸೇರಿದ್ದ ಹೆಬ್ಬಾವು ಮರಿಯನ್ನು ಹತ್ತಿರದ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.



Join Whatsapp