ಉಡುಪಿ: ಲೈಂಗಿಕ‌ ಕಿರುಕುಳ ಆರೋಪದಡಿ ವಶಕ್ಕೆ ಪಡೆದಿದ್ದ ವ್ಯಕ್ತಿ ಪೊಲೀಸ್​ ಠಾಣೆಯಲ್ಲೇ ಸಾವು

Prasthutha|

- Advertisement -

ಉಡುಪಿ: ಮಹಿಳೆಯೊಬ್ಬರಿಗೆ ಲೈಂಗಿಕ‌ ಕಿರುಕುಳ ಆರೋಪದಡಿ ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿ ಜಿಲ್ಲೆಯ ಬ್ರಹ್ಮಾವರ ಠಾಣೆಯಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ಕೇರಳ ಮೂಲದ ಬಿಜು ಮೋಹನ್(44) ಮೃತ ವ್ಯಕ್ತಿ. ಕೊಚ್ಚಿನ್ ಶಿಪ್ ಯಾರ್ಡ್​ನಲ್ಲಿ ಮೃತ ಬಿಜು ಕಾರ್ಮಿಕನಾಗಿದ್ದ.

- Advertisement -

ಮಹಿಳೆಯೊಬ್ಬರಿಗೆ ಲೈಂಗಿಕ‌ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ಈ ಕುರಿತು ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಆರೋಪಿಯನ್ನು ತಂದು ಠಾಣೆಯಲ್ಲಿ ಇರಿಸಿದ್ದರು. ಮುಂಜಾನೆ ಟಾಯ್ಲೆಟ್​ನಲ್ಲಿ ಆರೋಪಿ ಕುಸಿದು ಬಿದ್ದಿದ್ದಾರೆ. ಕೂಡಲೇ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಠಾಣೆಗೆ ಉಡುಪಿ ಎಸ್​ಪಿ ಡಾ.ಅರುಣ್ ಕುಮಾರ್ ಭೇಟಿ ನೀಡಿದ್ದಾರೆ.

ಆರೋಪಿ ಕಿರುಕುಳ ನೀಡಿದ್ದ ಮಹಿಳೆಯ ಪರಿಚಿತರಾದ ಗೌರಿ ಎಂಬುವವರು ಮಾತನಾಡಿ, ಸಂಜೆ 7ರ ಹೊತ್ತಿಗೆ ಈ ಅಪರಿಚಿತ ವ್ಯಕ್ತಿ, ಆತ ಮನೆ ಒಳಗೆ ನುಗ್ಗಲು ಪ್ರಯತ್ನಿಸಿದ. ನಮ್ಮ ಪಕ್ಕದ ಮನೆಯವರನ್ನು ಅಂಕಲ್, ಅಂಕಲ್ ಎಂದು ಮಗಳು ಕರೆದಿದ್ದಾಳೆ. ಆತ ವಿಪರೀತ ಕುಡಿದು ತೇಲಾಡುತ್ತಿದ್ದ. ಆತ ಎಲ್ಲಿಯವರು ಅಂತ ನಮಗೆ ಗೊತ್ತಿಲ್ಲ. ಅವನನ್ನು ಈವೆರೆಗೆ ನಾವು ನೋಡಿಲ್ಲ. ನೋಡಲು ಆತ ಗಟ್ಟಿಮುಟ್ಟಾಗಿದ್ದ. ಅಲ್ಪ ಸ್ವಲ್ಪ ಕನ್ನಡ , ಹಿಂದಿ ಮಾತನಾಡುತ್ತಿದ್ದ. ಅವನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಸ್ಥಳಕ್ಕೆ ಪೊಲೀಸರು ಬಂದರು ಎಂದು ಹೇಳಿದ್ದಾರೆ.



Join Whatsapp