ಉಡುಪಿ: ಲಾಭಾಂಶ ನೀಡುವುದಾಗಿ ನಂಬಿಸಿ 81ಲಕ್ಷ ರೂ. ವಂಚನೆ

Prasthutha|

ಉಡುಪಿ: ಲಾಭಾಂಶ ನೀಡುವುದಾಗಿ ನಂಬಿಸಿ 81ಲಕ್ಷ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಆದಿಉಡುಪಿ ಮಹಾದೇವಿ ಲೇಔಟ್‌ ಕುಂಜಿಗುಡ್ಡೆಯ ರೇಷ್ಮಾ ಬಾನು ಎಂಬವರಿಂದ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಕೆಳಮನೆ ದಸ್ತಗಿರ್‌ ಎಂಬಾತ ಆಕೆಯ ಗಂಡನ ಗೆಳೆತನ ಮಾಡಿಕೊಂಡಿದ್ದು, 2021ರ ನವೆಂಬರ್‌ ವೊದಲನೇ ವಾರದಲ್ಲಿ ಮನೆಗೆ ಬಂದು, ಹಿಂದೂಸ್ತಾನ್‌ ಲಿವರ್‌ ಲಿಮಿಟೆಡ್‌ ಕಂಪೆನಿಯಲ್ಲಿ ಆರ್ಥಿಕ ಸಹಾಯ ಮಾಡಿದರೆ ಪ್ರತಿ 35ನೇ ದಿನಕ್ಕೆ ಲಾಭಾಂಶ ನೀಡುವುದಾಗಿ ನಂಬಿಸಿದ್ದನು.

ಅದರಂತೆ ರೇಷ್ಮಾ ಹಂತ ಹಂತವಾಗಿ 81,00,000 ರೂ. ಹಣವನ್ನು ನೀಡಿದ್ದು, ಈ ಬಗ್ಗೆ ಕರಾರುಪತ್ರ ಮಾಡಿಕೊಂಡಿದ್ದರು. ಆದರೆ ಈವರೆಗೆ ಹಣವನ್ನು ವಾಪಸ್‌ ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.



Join Whatsapp