ಸ್ಟಾಲಿನ್ ಸಂಪುಟಕ್ಕೆ ಉದಯನಿಧಿ ಸ್ಟಾಲಿನ್ ಸೇರ್ಪಡೆ

Prasthutha|

ಚೆನ್ನೈ: ಹಲವು ತಿಂಗಳ ಚರ್ಚೆ ನಂತರ, ಆಡಳಿತಾರೂಢ ಡಿಎಂಕೆಯ ಯುವ ಘಟಕದ ಕಾರ್ಯದರ್ಶಿ ಮತ್ತು ಶಾಸಕ ಉದಯನಿಧಿ ಅವರು ಬುಧವಾರ ತಮ್ಮ ತಂದೆ ಎಂ.ಕೆ.ಸ್ಟಾಲಿನ್ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

- Advertisement -

45 ವರ್ಷದ ಉದಯನಿಧಿ ಅವರು ಇದೇ 14ರಂದು ಬೆಳಿಗ್ಗೆ 9.30 ಕ್ಕೆ ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯಪಾಲರ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

ವಿಶೇಷ ಕಾರ್ಯಕ್ರಮ ಅನುಷ್ಠಾನ (ಎಸ್ಪಿಐ) ಜೊತೆಗೆ ಉದಯ್ ಅವರಿಗೆ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಖಾತೆ ನೀಡಬಹುದು ಎಂದು ಡಿಎಂಕೆ ಮತ್ತು ಸರ್ಕಾರದ ಉನ್ನತ ಮೂಲಗಳು  ತಿಳಿಸಿವೆ

Join Whatsapp