ಔರಂಗಾಬಾದನ್ನು ಮರುನಾಮಕರಣ ಮಾಡಿದ ಉದ್ಧವ್ ನಡೆಯು ಕಾನೂನು ಬಾಹಿರ: ಏಕನಾಥ್ ಶಿಂಧೆ

Prasthutha|

ಮುಂಬೈ: ಔರಂಗಾಬಾದ್ ಹೆಸರನ್ನು ಮರುನಾಮಕರಣ ಮಾಡಿದ ಉದ್ಧವ್ ಠಾಕ್ರೆ ನಡೆಯು ಕಾನೂನು ಬಾಹಿರವಾಗಿತ್ತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ ಹೇಳಿದ್ದಾರೆ.
ಮಾಡುವ ಕುರಿತು

- Advertisement -

ಔರಂಗಾಬಾದ್ ಮರುನಾಮಕರಣದ ಮಹಾ ವಿಕಾಸ್ ಅಘಾಡಿ ಸರ್ಕಾರದ ನಿರ್ಧಾರವು ಕಾನೂನುಬಾಹಿರವಾಗಿದೆ ಆದ್ದರಿಂದ ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಮತ್ತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಅನುಮೋದನೆ ನೀಡಲಾಗುವುದು ಎಂದು ಶಿಂಧೆ ಹೇಳಿದ್ದಾರೆ.

ಜೂನ್ 29 ರಂದು ಮಹಾ ವಿಕಾಸ್ ಅಘಾಡಿ ಸರ್ಕಾರದ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ, ಉದ್ಧವ್ ಠಾಕ್ರೆ ಆಡಳಿತವು ತರಾತುರಿಯಿಂದ ಔರಂಗಾಬಾದನ್ನು ಸಂಭಾಜಿ ನಗರ ಎಂದು ಅದೇ ರೀತಿ ಉಸ್ಮಾನಾಬಾದ್ ನಗರವನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಿತ್ತು.

- Advertisement -

ಔರಂಗಾಬಾದ್ ಗೆ ಮೊಘಲ್ ಚಕ್ರವರ್ತಿ ಔರಂಗಜೇಬ್ ರ ಹೆಸರನ್ನು ಇಡಲಾಗಿತ್ತು. ಅದನ್ನು ಬದಲಾಯಿಸಿದ ಠಾಕ್ರೆ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿಯ ಹಿರಿಯ ಮಗನಾದ 17 ನೇ ಶತಮಾನದ ಆಡಳಿತಗಾರ ಸಂಭಾಜಿ ಹೆಸರಿಗೆ ಬದಲಾಯಿಸಿದ್ದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಉದ್ಧವ್ ಠಾಕ್ರೆ ಅವರು ತೆಗೆದುಕೊಂಡ ಕೊನೆಯ ನಿರ್ಧಾರಗಳಲ್ಲಿ ಮರುನಾಮಕರಣವೂ ಒಂದು. ಆ ನಿರ್ಧಾರವನ್ನು ಶಿಂಧೆ ಕಠುವಾಗಿ ವಿರೋಧಿಸಿದ್ದು ಆ ಮರುನಾಮಕರಣವು ಕಾನೂನು ಬಾಹಿರ ಪ್ರಕ್ರಿಯೆ ಎಂದು ಹೇಳಿದ್ದಾರೆ.



Join Whatsapp