ತನಿಖಾ ಸಂಸ್ಥೆಗಳು ‘ಸುಪಾರಿ’ ಪಡೆದು ರಾಜಕೀಯ ವಿರೋಧಿಗಳನ್ನು ಮುಗಿಸುತ್ತಿದೆ: ಉದ್ಧವ್ ಠಾಕ್ರೆ ಆರೋಪ

Prasthutha|

ಮುಂಬೈ: ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದಿಂದ ದಿಂದ ‘ಸುಪಾರಿ’ ಪಡೆದು ರಾಜಕೀಯ ವಿರೋಧಿಗಳನ್ನು ಮುಗಿಸುತ್ತಿದೆ ಎಂದು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.

- Advertisement -

ಮನಿ ಲಾಂಡರಿಂಗ್ ಪ್ರಕರಣದಲ್ಲಿ 101 ದಿನಗಳ ಸೆರೆವಾಸದ ನಂತರ ಬಿಡುಗಡೆಯಾದ ಶಿವಸೇನೆ ಸಂಸದ ಸಂಜಯ್ ರಾವತ್  ಗುರುವಾರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಖಾಸಗಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಮಾಧ್ಯಮಗಗಳೊಂದಿಗೆ ಮಾತನಾಡಿದ ಠಾಕ್ರೆ, ಈ ಕೇಂದ್ರೀಯ ಏಜೆನ್ಸಿಗಳು ಯಾವುವು? ಅವರು ಕೇಂದ್ರದ ‘ಸಾಕು ಪ್ರಾಣಿಗಳಂತೆ’ ವರ್ತಿಸುತ್ತಾರೆ. ಯಾರನ್ನು ಹೇಳಿದರೂ ಅವರನ್ನು ಗುರಿಯಾಗಿಸಲು ತನಿಖಾ ಸಂಸ್ಥೆಗಳು ಸುಪಾರಿ ಪಡೆದುಕೊಳ್ಳುತ್ತಿದ್ದಾರೆ. ಈ ಫೆಡರಲ್ ತನಿಖಾ ಸಂಸ್ಥೆಗಳನ್ನು ಏಕೆ ಮುಚ್ಚಬಾರದು? ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ರಾಜಕೀಯ ವಿರೋಧಿಗಳ ವಿರುದ್ಧ ಬಿಜೆಪಿ ಸರಕಾರ ಸಿಬಿಐ, ಇಡಿ, ಐಟಿ, ಎನ್ಸಿಬಿ ಮತ್ತು ಎನ್ಐಎಯಂತಹ ಏಜೆನ್ಸಿಗಳನ್ನು ಬಳಸುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.



Join Whatsapp