ಉದಯನಿಧಿ ಮಾತನಾಡಿದ್ದು ಸನಾತನ ಧರ್ಮದ ಅಮಾನವೀಯ ತತ್ವಗಳ ಬಗ್ಗೆ : ಸ್ಟಾಲಿನ್

Prasthutha|

ಚೆನ್ನೈ: ”ನನ್ನ ಮಗ ಉದಯನಿಧಿ ಮಾತನಾಡಿದ್ದು ಸನಾತನ ಧರ್ಮದ ಅಮಾನವೀಯ ತತ್ವಗಳ ಬಗ್ಗೆ” ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಗುರುವಾರ ಮಗ ನೀಡಿರುವ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

- Advertisement -

‘ದಬ್ಬಾಳಿಕೆಯ ತತ್ವಗಳ ವಿರುದ್ಧದ ಉದಯನಿಧಿಯವರ ನಿಲುವನ್ನು ಸಹಿಸಲಾಗದ ಬಿಜೆಪಿ ಪರ ಶಕ್ತಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿ, ಸನಾತನ ಚಿಂತನೆಯ ಜನರ ನರಮೇಧಕ್ಕೆ ಉದಯನಿಧಿ ಕರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಂತಹವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಸೇರುತ್ತಾರೆ” ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

“ಉದಯನಿಧಿ ಸ್ಟಾಲಿನ್ ಅವರು ಸನಾತನ ಸಂಸ್ಥೆಯು ಬೋಧಿಸಿದ ಅಮಾನವೀಯ ತತ್ವಗಳ ಬಗ್ಗೆ ಕೆಲವು ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲದೆ, ಪರಿಶಿಷ್ಟ ಜಾತಿ, ಬುಡಕಟ್ಟು ಮತ್ತು ಮಹಿಳೆಯರ ವಿರುದ್ಧ ತಾರತಮ್ಯ ಮಾಡುವ ಸನಾತನ ತತ್ವಗಳ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಪೋಷಿಸಲ್ಪಟ್ಟ ಸಾಮಾಜಿಕ ಮಾಧ್ಯಮ ಗುಂಪು ಉತ್ತರದ ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡಿದೆ. ಉದಯನಿಧಿ ಅವರು ತಮಿಳು ಅಥವಾ ಇಂಗ್ಲಿಷ್‌ನಲ್ಲಿ ‘ಜನಾಂಗೀಯ ಹತ್ಯೆ’ ಎಂಬ ಪದವನ್ನು ಬಳಸಿಲ್ಲ. ಆದರೂ, ಸುಳ್ಳುಗಳನ್ನು ಹೇಳಿಕೊಂಡು ಹರಡಲಾಯಿತು” ಎಂದು ಸ್ಟಾಲಿನ್ ಹೇಳಿದ್ದಾರೆ.



Join Whatsapp