ನವದೆಹಲಿ: ಸುದ್ದಿವಾಹಿನಿಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರೆಯ ಪ್ರವಾದಿ ನಿಂದನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಮತ್ತು ಹಲವು ಅರಬ್ ದೇಶಗಳು ಅದನ್ನು ಬಲವಾಗಿ ಖಂಡಿಸಿ ,ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿದೆ. ಈ ರೀತಿ ಇಸ್ಲಾಮಿಕ್ ದೇಶಗಳನ್ನು ಪ್ರಚೋದಿಸಿ ದೇಶ ಕ್ಷಮೆಯಾಚಿಸುವಂತೆ ಮಾಡಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಎಂದು ಮಾಹಿತಿ ಆಯುಕ್ತ ಉದಯ್ ಮಹುಕರ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಪ್ರವಾದಿ ನಿಂದನೆ ಚರ್ಚೆ ಬಗ್ಗೆ ಪ್ರತಿಕ್ರಯಿಸಿದ ಅವರು, ಇಸ್ಲಾಮಿಕ್ ದೇಶಗಳನ್ನು ಕೆರಳಿಸಿದ ನಾಗರಿಕರ ಹೆಸರನ್ನು ಪಟ್ಟಿ ಮಾಡಬೇಕು. ನಂತರ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಇಸ್ಲಾಮಿಕ್ ಕಂಟ್ರಿಗಳ ಮುಂದೆ ಕ್ಷಮೆಯಾಚಿಸುವಂತೆ ಮಾಡಿದವರ ಮೇಲೆ ದೇಶದ್ರೋಹ ಪ್ರಕರಣ ಹೊರಿಸಲು ಇದು ಸರಿಯಾದ ಸಮಯ. ಅವರು ಅಖಂಡ ಭಾರತಕ್ಕೆ ಮಾಡಿದ ಅವಮಾನ ಇದಾಗಿದೆ ಎಂದು ಮಾಜಿ ಪತ್ರಕರ್ತರು ಮತ್ತು ಮಾಹಿತಿ ಆಯುಕ್ತರೂ ಆದ ಉದಯ್ ಮಹುಕರ್ ಹೇಳಿದರು