ನವದೆಹಲಿ: ಉಬರ್ ಆಟೋ ಚಾಲಕನೋರ್ವ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪತ್ರಕರ್ತೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭಾರತ್ ನಗರ ನಿವಾಸಿಯಾದ ಪತ್ರಕರ್ತೆಯು ಬುಧವಾರ ಸಂಜೆ 4.40ರ ಸುಮಾರಿಗೆ ನ್ಯೂ ಫ್ರೆಂಡ್ಸ್ ಕಾಲೋನಿಯಿಂದ ಮಲ್ವಿಯಾ ನಗರದಲ್ಲಿರುವ ತನ್ನ ಸ್ನೇಹಿತೆಯ ಮನೆಗೆ ಉಬರ್ ಆಟೊದಲ್ಲಿ ತೆರಳುತ್ತಿದ್ದಾಗ, ಆಟೋ ಚಾಲಕ ಪತ್ರಕರ್ತೆಯನ್ನು ಕಾಮುಕ ದೃಷ್ಟಿಯಿಂದ ನೋಡಿದ ಎಂದು ಆರೋಪಿಸಲಾಗಿದೆ.
ಆರೋಪಿ ಪತ್ತೆಗಾಗಿ ತನಿಖೆ ಆರಂಭಿಸಲಾಗಿದೆ ಎಂದು ಆಗ್ನೇಯ ಭಾಗದ ಉಪ ಪೊಲೀಸ್ ಆಯುಕ್ತ ರಾಜೇಶ್ ಡಿಯೋ ತಿಳಿಸಿದ್ದಾರೆ.