ಉಬೈಸ್ ಗೂನಡ್ಕ ಜಿಲ್ಲಾ NSUI ಕಾರ್ಯದರ್ಶಿಯಾಗಿ ನೇಮಕ

Prasthutha|

ಸುಳ್ಯ: ಸುಳ್ಯ ತಾಲ್ಲೂಕು ಎನ್ ಎಸ್ ಯುಐ ಕಾರ್ಯದರ್ಶಿ ಉಬೈಸ್ ಗೂನಡ್ಕ ಅವರನ್ನು ಜಿಲ್ಲಾ ಎನ್ ಎಸ್ ಯು ಐ (ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ಕಾರ್ಯದರ್ಶಿಯಾಗಿ ರಾಜ್ಯ ಎನ್ ಎಸ್ ಯುಐನ ಅಧ್ಯಕ್ಷ ಕೀರ್ತಿ ಗಣೇಶ್ ನೇಮಿಸಿ ಆದೇಶ ಹೊರಡಿಸಿದ್ದಾರೆ.

- Advertisement -

ಉಬೈಸ್ ಗೂನಡ್ಕ ಅವರು ಸಂಪಾಜೆ ಗ್ರಾಮದ ಪ್ರಥಮ ಮುಸ್ಲಿಮ್ ಪಂಚಾಯತ್ ಸದಸ್ಯರಾಗಿ, 20 ವರ್ಷಗಳ ಕಾಲ ಸಂಪಾಜೆ ಸಹಕಾರಿ ಸಂಘದ ನಿರ್ದೇಶಕರಾಗಿ, ಗೂನಡ್ಕ ಹಾಲು ಸೊಸೈಟಿ ಸ್ಥಾಪಕ ಅಧ್ಯಕ್ಷರಾಗಿ, ಕೆ ಕೆ ಪೈ ಅವಿಭಕ್ತ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಸಮಿತಿಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ, ಸುಳ್ಯ ತಾಲ್ಲೂಕು ಎಪಿಎಂಸಿ ಉಪಾಧ್ಯಕ್ಷರಾಗಿ, ಕೆ ಡಿ ಪಿ ಸದಸ್ಯರಾಗಿ, ಭೂ ನ್ಯಾಯ ಮಂಡಳಿ ಸದಸ್ಯರಾಗಿ, ಗೂನಡ್ಕ ಬದ್ರಿಯಾ ಜಮಾಅತಿನ ಸ್ಥಾಪಕ ಅಧ್ಯಕ್ಷರಾಗಿ ದುಡಿದು ಪ್ರಸ್ತುತ ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಪಾಪ್ಯುಲರ್ ಎಜುಕೇಷನ್ ಸೊಸೈಟಿ ಯ ಸ್ಥಾಪಕ ನಿರ್ದೇಶಕರಾಗಿ ದುಡಿಯುತ್ತಿರುವ ಹಿರಿಯರಾದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಹಕಾರಿ ದುರೀಣ ಉಮ್ಮರ್ ಹಾಜಿ ಗೂನಡ್ಕ ಹಾಗೂ ರುಖಿಯಾ ದಂಪತಿಯ  ಕೊನೆಯ ಪುತ್ರರಾಗಿದ್ದಾರೆ

ದ್ವಿತೀಯ ಪಿ ಯು ಸಿ ವಿದ್ಯಾರ್ಥಿಯಾದ ಉಬೈಸ್ ಗೂನಡ್ಕ ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಗೂನಡ್ಕದ ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಇವರು ಗೂನಡ್ಕದ ಪ್ರತಿಷ್ಠಿತ ಮನೆತನದವರು. ಇವರ ಸಂಘಟನಾ ಸಾಮರ್ಥ್ಯವನ್ನು ಗಮನಿಸಿ ರಾಜ್ಯಾಧ್ಯಕ್ಷರು ಈ ಜವಾಬ್ದಾರಿಯನ್ನು ನೀಡಿದ್ದಾರೆ. 



Join Whatsapp