ಕುಂದಾಪುರ: ಹಿಜಾಬ್ ಗೆ ಕೇಸರಿ ಶಾಲಿನ ಕಿರಿಕ್ | ಧ್ವನಿ ಎತ್ತಿದ ಯುಎಇ ರಾಜಕುಮಾರಿ

Prasthutha|

- Advertisement -

ಕುಂದಾಪುರ : ಹಿಜಾಬ್ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗೆ ಹಾಕಿರುವ ಬಗ್ಗೆ ರಾಜಕುಮಾರಿ ಹೆಂಡ್ ಅಲ್-ಕಾಸಿಮಿ ಧ್ವನಿ ಎತ್ತಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಹೆಂಡ್ ಅಲ್-ಕಾಸಿಮಿ ಶಾರ್ಜಾದ ರಾಜಮನೆತನ ಖಾಸಿಮಿ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

- Advertisement -

ಹಿಜಾಬ್ (ಶಿರವಸ್ತ್ರ) ಧರಿಸಿದ್ದ ಕಾರಣಕ್ಕಾಗಿ ವಿದ್ಯಾರ್ಥಿನಿಯರಿಗೆ ಕೆಲವು ದಿನಗಳಿಂದ ಪ್ರವೇಶ ನಿರಾಕರಿಸಿ ಕಾಲೇಜಿನ ಹೊರಗಡೆ ನಿಲ್ಲಿಸಲಾಗಿತ್ತು. ಈ ನಡುವೆ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದು ವಿವಾದ ಸೃಷ್ಟಿಸಿದ್ದರು.

ಈ ಬಗ್ಗೆ ಯುಎಇ ರಾಜಕುಮಾರಿ ಧ್ವನಿ ಎತ್ತಿದ್ದು, ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟೊಂದನ್ನು ಹಾಕಿದ್ದಾರೆ.

Join Whatsapp