ಮನಾಮ: ರಮಝಾನ್ ಹಿನ್ನೆಲೆಯಲ್ಲಿ ಯುಎಇಯಲ್ಲಿ ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಾವಿರಾರು ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಿದೆ.
ಸುಮಾರು 1,025 ಕೈದಿಗಳನ್ನು ಬಿಡುಗಡೆ ಮಾಡುವಂತೆ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಆದೇಶಿಸಿದ್ದಾರೆ.
“ಮಾನವೀಯ ಪರಿಗಣನೆಗಳನ್ನು ಆಧರಿಸಿದ ಯುಎಇ ಅಧ್ಯಕ್ಷರ ಈ ನಿರ್ಧಾರವು ಕ್ಷಮಾದಾನ ಪಡೆದ ಕೈದಿಗಳಿಗೆ ಹೊಸ ಜೀವನವನ್ನು ಪ್ರಾರಂಭಿಸಿ ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ. ಈ ನಿರ್ಧಾರವು ಕ್ಷಮೆ ಮತ್ತು ಸಹಿಷ್ಣುತೆಯ ಮೌಲ್ಯಗಳ ಪ್ರತಿಬಿಂಬವಾಗಿದೆ” ಎಂದು ಎಮಿರೇಟ್ಸ್ ಸುದ್ದಿ ಸಂಸ್ಥೆ ಹೇಳಿದೆ.