ದುಬೈ: ಉಭಯ ರಾಷ್ಟ್ರಗಳ ಮಧ್ಯೆ ಪ್ರರಸ್ಪರ ಶಾಂತಿ-ಸಂಬಧವನ್ನು ಬಲಪಡಿಸುವ ನಿಟ್ಟಿನಲ್ಲಿ ತಾನು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ಇಂದು ದೂರವಾಣಿಯಲ್ಲಿ ಮಾತನಾಡಿರುವುದಾಗಿ ಅಬೂಧಾಬಿ ರಾಜಕುಮಾರ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಹೇಳಿದ್ದಾರೆ.
ತಾನು ರಾಜಕುಮಾರರನ್ನು ಇಸ್ರೇಲ್ ಗೆ ಆಹ್ವಾನಿಸಿದ್ದು, ತನಗೂ ಅದೇ ರೀತಿಯ ಆಹ್ವಾನ ದೊರೆತಿದೆ. ಈ ಕುರಿತು ದಿನಾಂಕಗಳು ಇನ್ನೂ ಖಾತರಿಯಾಗಿಲ್ಲ ಎಂದು ನೇತನ್ಯಾಹು ಹೇಳಿದ್ದಾರೆ.
ತನ್ಮಧ್ಯೆ ಯು.ಎ.ಇಯೊಂದಿಗೆ ಸಂಬಂಧವನ್ನು ಯಥಾಸ್ಥಿತಿಗೆ ತರುವ ಕುರಿತ ಯು.ಎ.ಇ ಯೊಂದಿಗೆ ಒಪ್ಪಂದಕ್ಕೆ ಇಸ್ರೇಲಿ ಕ್ಯಾಬಿನೆಟ್ ಈಗಾಗಲೇ ಒಪ್ಪಿದೆ. ಅದನ್ನು ಸಂಸತ್ತಿನ ಅನುಮೋದನೆಗೆ ಕಳುಹಿಸಲಾಗುವುದು.