ಯುಎಇ ಮಧ್ಯಸ್ಥಿಕೆ: ರಶ್ಯ-ಉಕ್ರೇನ್ ದೇಶಗಳ ತಲಾ 103 ಯುದ್ಧಕೈದಿಗಳ ವಿನಿಮಯ

Prasthutha|

ಕೀವ್ : ಯುಎಇ ಮಧ್ಯಸ್ಥಿಕೆಯಲ್ಲಿ ನಡೆದ ಮಹತ್ವದ ಕೈದಿಗಳ ವಿನಿಮಯ ಒಪ್ಪಂದದಡಿ ರಶ್ಯ ಹಾಗೂ ಉಕ್ರೇನ್ ದೇಶಗಳು ಶನಿವಾರ ತಲಾ 103 ಯುದ್ಧಕೈದಿಗಳನ್ನು ವಿನಿಮಯ ಮಾಡಿಕೊಂಡಿವೆ. ಶನಿವಾರ ಬಿಡುಗಡೆಯಾದ ರಶ್ಯನ್ ಯೋಧರೆಲ್ಲರೂ ಗಡಿಪ್ರದೇಶವಾದ ಕರ್ಸ್ಕ್ ಪ್ರಾಂತಕ್ಕೆ ಸೇರಿದವರೆಂದು ಇಂಟರ್‌ಫ್ಯಾಕ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

- Advertisement -

ಬಿಡುಗಡೆಗೊಂಡ ಎಲ್ಲಾ ರಶ್ಯನ್ ಯೋಧರು ಬೆಲಾರಸ್ ಗಣರಾಜ್ಯದ ಪ್ರಾಂತವೊಂದರಲ್ಲಿದ್ದು, ಅಲ್ಲಿ ಅವರಿಗೆ ಸೂಕ್ತ ಮಾನಸಿಕ ಹಾಗೂ ವೈದ್ಯಕೀಯ ನೆರವನ್ನು ಒದಗಿಸಲಾಗುತ್ತಿದೆ ಮತ್ತು ಅವರಿಗೆ ಸಂಬಂಧಿಕರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯವು ಟೆಲಿಗ್ರಾಂ ಜಾಲತಾಣದಲ್ಲಿ ತಿಳಿಸಿದೆ.



Join Whatsapp