ಹೊಸದಿಲ್ಲಿ: ಪಾಸ್ ಪೋರ್ಟ್ ನಲ್ಲಿ ಏಕನಾಮ ಇರುವವರಿಗೆ ಯುಎಇ ಪ್ರವೇಶ ನಿರಾಕರಿಸಿದೆ.
ಯಾವುದೇ ಸರ್‌ನೇಮ್ ಇಲ್ಲದ ಹೆಸರು ಮಾತ್ರ ಹೊಂದಿರುವ ವ್ಯಕ್ತಿಗಳಿಗೆ ನಮ್ಮ ದೇಶಕ್ಕೆ ಪ್ರವೇಶವಿಲ್ಲ ಎಂಬ ಹೊಸ ನಿಯಮವನ್ನು ಯುಎಇ ಜಾರಿಗೆ ತಂದಿದೆ.
ನ.21ರಿಂದಲೇ ಅನ್ವಯವಾಗುವಂತೆ ಪ್ರವೇಶ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಏರ್‌ಇಂಡಿಯಾ, ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳು ಸುತ್ತೋಲೆಯನ್ನೂ ಹೊರಡಿಸಿವೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ನಿಯಮ ಅನ್ವಯವಾಗುತ್ತದೆ. ಪಾಸ್‌ಪೋರ್ಟ್‌ನಲ್ಲಿ ಏಕನಾಮ ಇದ್ದರೆ, ನಿಮಗೆ ಪ್ರವೇಶ ಸಿಗುವುದಿಲ್ಲ. ನಿಮ್ಮ ಹೆಸರಿನ ಜೊತೆಗೆ ಉಪನಾಮಗಳಿದ್ದರೆ ನೀವು ಯಾವುದೇ ಸಮಸ್ಯೆಯಿಲ್ಲದೇ ಯುಎಇಗೆ ಎಂಟ್ರಿ ಪಡೆಯಬಹುದು.
ಈ ನಿಯಮವು ವಿಸಿಟಿಂಗ್ ವೀಸಾ, ವೀಸಾ ಆನ್ ಅರೈವಲ್, ಉದ್ಯೋಗ ವೀಸಾ ಮತ್ತು ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಅನ್ವಯವಾಗುತ್ತದೆ. ಯುಎಇ ರೆಸಿಡೆಂಟ್ ಕಾರ್ಡ್ ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ.