ವ್ಯವಹಾರಗಳ ಮೇಲೆ ಕಾರ್ಪೋರೇಶನ್ ತೆರಿಗೆ ವಿಧಿಸಲು UAE ನಿರ್ಧಾರ

Prasthutha|

- Advertisement -

ಅಬುಧಾಬಿ: ವ್ಯವಹಾರಗಳಿಗೆ ಹೊಸ ಕಾರ್ಪೊರೇಶನ್ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಲು ಯುಎಇ ನಿರ್ಧರಿಸಿದೆ.

ಜೂನ್ 2023ಕ್ಕೆ ಹಣಕಾಸು ವರ್ಷ ಪ್ರಾರಂಭವಾಗುತ್ತಲೇ UAE ಒಂಬತ್ತು ಶೇಕಡಾ ಕಾರ್ಪೋರೇಶನ್ ತೆರಿಗೆ ವಿಧಿಸಲಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.

- Advertisement -

3,75,000 ದಿರ್ಹಮ್ ಗಿಂತ ಹೆಚ್ಚಿನ ಲಾಭ ಗಳಿಸುವ ವ್ಯವಹಾರಗಳಿಗೆ ಈ ತೆರಿಗೆ ಅನ್ವಯಿಸಲಿದ್ದು, ವಿದೇಶಿ ಬ್ಯಾಂಕ್ ಗಳ ಯುಎಇ ಶಾಖೆಗಳಿಗೂ ಶೇ.20ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ.

ಯುಎಇ ಕಾರ್ಪೋರೇಶನ್ ತೆರಿಗೆಯನ್ನು ಪರಿಚಯಿಸುವುದರೊಂದಿಗೆ, ಎಲ್ಲಾ ಆರು ಗಲ್ಫ್ ರಾಷ್ಟ್ರಗಳೂ ಕಾರ್ಪೋರೇಶನ್ ತೆರಿಗೆಯನ್ನು ಪರಿಚಯಿಸಲಿದೆ ಎಂದು ಹೇಳಲಾಗಿದೆ.

GCCಯಲ್ಲಿ ಅತೀ ಹೆಚ್ಚು ಕಾರ್ಪೋರೇಶನ್ ತೆರಿಗೆ ವಿಧಿಸುವ ರಾಷ್ಟ್ರ ಸೌದಿ ಅರೇಬಿಯಾ. ಸೌದಿ ಅರೇಬಿಯಾ 20 ಶೇಕಡಾ ತೆರಿಗೆಯನ್ನು ವಿಧಿಸುತ್ತದೆ. ಒಮಾನ್ ಮತ್ತು ಕುವೈತ್ ನಲ್ಲಿ ಇದು ಶೇ.15ರಷ್ಟಿದೆ.



Join Whatsapp