ದುಬೈ: ಯುಎಇ ಯಲ್ಲಿ ಬಾಂಗ್ಲಾದೇಶದ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಬೀದಿಗಿಳಿದ ಜನರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಮೀಸಲಾತಿ ಕಾನೂನು ವಿರೋಧಿಸಿ ಹಿಂಸಾಚಾರ ಭುಗಿಲೆದ್ದ ವೇಳೆಯಲ್ಲೇ ಯುಎಇಯಲ್ಲಿಯೂ ಪ್ರತಿಭಟನೆ ನಡೆಸುವ ದುಸ್ಸಾಹಸ ನಡೆಸಿದ 53 ಬಾಂಗ್ಲಾದೇಶಿ ಪ್ರಜೆಗಳಿಗೆ ಅಬುಧಾಬಿ ಫೆಡರಲ್ ಮೇಲ್ಮನವಿ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಒಬ್ಬ ಬಾಂಗ್ಲಾಪ್ರಜೆಗೆ 11 ವರ್ಷಗಳ ಶಿಕ್ಷೆ, ಮೂವರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಎಮಿರೇಟ್ಸ್ ಸುದ್ದಿ ಸಂಸ್ಥೆ WAM ತಿಳಿಸಿದೆ.
ಜೈಲು ಶಿಕ್ಷೆಯನ್ನು ಅನುಸರಿಸಿ ಬಾಂಗ್ಲಾದೇಶೀಯರನ್ನು ಯುಎಇಯಿಂದ ಗಡಿಪಾರು ಮಾಡಲು ನ್ಯಾಯಾಲಯ ಆದೇಶಿಸಿದೆ.
ಬಾಂಗ್ಲಾದೇಶದ ಪ್ರಜೆಗಳು ಯುಎಇಯ ಮೂರನೇ ಅತಿದೊಡ್ಡ ವಲಸಿಗ ಸಮುದಾಯವಾಗಿದ್ದಾರೆ.