ಅಂಡರ್ 19 ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಫೈನಲ್ ಪ್ರವೇಶಿಸಿದೆ. ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎರಡು ವಿಕೆಟ್ಗಳ ಗೆಲುವು ಸಾಧಿಸಿದೆ. ಭಾರತ ತಂಡದ ಪರ ಸಚಿನ್ ದಾಸ್ ಮತ್ತು ಉದಯ್ ಸಹರಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 244 ರನ್ ಬಾರಿಸಿದರು. ತಂಡದ ಪರ ಲುಹಾನ್ ಡ್ರೆ ಪ್ರಿಟೋರಿಯಸ್ ಅವರು 3 ಸಿಕ್ಸರ್, 6 ಬೌಂಡಿಗಳೊಂದಿಗೆ 76 ರನ್ಗಳನ್ನು ಬಾರಿಸಿದರು. ರಿಚರ್ಡ್ ಸೆಲೆಟ್ಸ್ವೇನ್ ಅವರು ಎರಡು ಸಿಕ್ಸ್, 4 ಬೌಂಡರಿಗಳೊಂದಿಗೆ 64 ಬಾರಿಸಿದು. ಆ ಮೂಲಕ ಈ ಇಬ್ಬರು ಆಟಗಾರರು ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
245 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡವು 8 ವಿಕೆಟ್ಗಳನ್ನು ಕಳೆದುಕೊಂಡು 48.5 ಓವರ್ಗೆ 248 ಬಾರಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಸಚಿನ್ ದಾಸ್ 1 ಸಿಕ್ಸ್ ಹಾಗೂ 11 ಬೌಂಡಿರಿಗಳನ್ನು ಸಿಡಿಸಿ 96 ರನ್ಗಳನ್ನು ಕಲೆ ಹಾಕಿದರೆ, ಉದಯ್ ಸಹರಾನ ಅವರು 6 ಬೌಂಡರಿಗಳನ್ನು ಬಾರಿಸಿ 81 ರನ್ಗಳನ್ನು ಕಲೆಹಾಕಿದರು. ಆ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಭಾರತದ ಪರ ರಾಜ್ ಲಿಂಬಾನಿ 3 ವಿಕೆಟ್, ಮುಶೀರ್ ಖಾನ್ 2 ವಿಕೆಟ್, ಸೌಮಿ ಕುಮಾರ್ ಪಾಂಡೆ, ನಮನ್ ತಿವಾರಿ ತಲಾ ಒಂದೊಂದು ವಿಕೆಟ್ ಪಡೆದರು. ಸೌತ್ ಆಫ್ರಿಕಾ ಪರ, ಟ್ರಿಸ್ಟಾನ್ ಲೂಸ್ ಮತ್ತು ಕ್ವೆನಾ ಮಫಕಾ ಅವರು ತಲಾ 3 ವಿಕೆಟ್ ಪಡೆದರು.