ಸಂಘಪರಿವಾರದಿಂದ ಹತ್ಯೆಯಾದ ಮಸೂದ್ ನಿವಾಸಕ್ಕೆ ಯು.ಟಿ.ಖಾದರ್ ಭೇಟಿ: ಪ್ರವೀಣ್ ಕುಟುಂಬದವರಿಗೂ ಸಂತಾಪ

Prasthutha|

ಸುಳ್ಯ: ಬೆಳ್ಳಾರೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್ ನಿವಾಸಕ್ಕೆ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಶುಕ್ರವಾರ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

- Advertisement -

ಅದೇ ರೀತಿ ಹತ್ಯೆಗೀಡಾದ ಪ್ರವೀಣ ನೆಟ್ಟಾರು ಅವರ ಪತ್ನಿ ಮತ್ತು ಹೆತ್ತವರು ವಿಶ್ರಾಂತಿಯಲ್ಲಿರುವುದರಿಂದ ದೂರವಾಣಿ ಮೂಲಕ ಅವರಿಗೆ ಸಾಂತ್ವನ ತಿಳಿಸಿದರು.

 ಪ್ರವೀಣ್ ನೆಟ್ಟಾರುರವರ ಚಿಕ್ಕಪ್ಪ ವಿಶ್ವನಾಥ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ತಿಳಿಸಿದರು. ಕಳೆದ ಎರಡು ದಿನಗಳಿಂದ ಸತತ ನಾಯಕರು ಇತರರ ಭೇಟಿಯಿಂದಾಗಿ ಪ್ರವೀಣ ನೆಟ್ಟಾರು ಅವರ ಪತ್ನಿ ಹಾಗೂ ಹೆತ್ತವರು ಧಣಿದಿದ್ದು, ಈ ಹಿನ್ನೆಲೆಯಲ್ಲಿ ವಿಶ್ರಾಂತಿ ಮೊರೆ ಹೋಗಿದ್ದಾರೆ. ತಾವು ಕರೆ ಮಾಡಿ ಸಾಂತ್ವನ ತಿಳಿಸಿದ್ದು ಮನೆಗೆ ಭೇಟಿ ನೀಡಿದ್ದಷ್ಟೆ ತೃಪ್ತಿಯಾಯಿತೆಂದು ಈ ಸಂದರ್ಭದಲ್ಲಿ ಪ್ರವೀಣ್ ಚಿಕ್ಕಪ್ಪ ವಿಶ್ವನಾಥ ಯು.ಟಿ.ಖಾದರ್ ಗೆ ತಿಳಿಸಿದರು.



Join Whatsapp