BJP ಆಡಳಿತದ ಉಳಿವಿಗಾಗಿ ಆಕ್ಸಿಜನ್ ಹುಡುಕುತ್ತಿದೆ : ಮಾಜಿ ಸಚಿವ ಯು.ಟಿ.ಖಾದರ್

Prasthutha|

ಮಂಗಳೂರು : ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರವನ್ನು ಮಾಜಿ ಸಚಿವ ಯುಟಿ ಖಾದರ್ ಟೀಕಿಸಿದ್ದು, ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವೈಫಲ್ಯ ಕಂಡಿದೆ. ಇದೀಗ ಬಿ.ಜೆ.ಪಿ ಪಕ್ಷದವರು ಆಡಳಿತದ ಉಳಿಯುವಿಕೆಗಾಗಿ ಆಕ್ಸಿಜನ್ ಹುಡುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟೂಲ್ ಕಿಟ್ ವಿಚಾರದಲ್ಲಿ ಬಿ.ಜೆ‌.ಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದು, ವ್ಯಾಕ್ಸಿನೇಷನ್ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ವ್ಯಾಕ್ಸಿನ್ ವಿಚಾರದಲ್ಲಿ ನಮ್ಮ ದೇಶಕ್ಕೆ ಅನ್ಯಾಯವಾಗಿದೆ. ನಮ್ಮ ದೇಶಕ್ಕೆ ಮೊದಲು ವ್ಯಾಕ್ಸಿನ್ ಕೊಡುವ ಬದಲು ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಕೊಟ್ಟಿದ್ದು ಯಾಕೆ? ಅವೆಲ್ಲವನ್ನೂ ಬಿಟ್ಟು ಬಿ.ಜೆ.ಪಿಯವರು ಈಗ ಟೂಲ್ ಕಿಟ್ ಹಿಡಿದುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಖಾದರ್, ಜನರ ಹಿತದೃಷ್ಟಿಯನ್ನು ಇಟ್ಟುಕೊಂಡು ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಲಾಕ್ ಡೌನ್ ಪ್ಯಾಕೇಜ್ ನಿಂದ ಕರಾವಳಿ ಭಾಗಕ್ಕೆ ಅನ್ಯಾಯವಾಗಿದ್ದು, ರಾಜ್ಯ ಸರ್ಕಾರ ಕರಾವಳಿಯ ಮೀನುಗಾರರನ್ನು ನಿರ್ಲಕ್ಷ್ಯ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಮೀನುಗಾರ ಮಂತ್ರಿ ಕೊಟ್ಟರೆ ಸಾಲದು, ಮೀನುಗಾರರಿಗೆ ಬೆಂಬಲ ನೀಡಬೇಕು. ಕರಾವಳಿಯ ಯಾವುದೇ ವರ್ಗದ ಜನರಿಗೆ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



Join Whatsapp