ಇಸ್ಲಾಮೋಫೋಬಿಯಾ ವಿರೋಧಿ ಮಸೂದೆ ಅಂಗೀಕರಿಸಿದ ಅಮೆರಿಕ ಸಂಸತ್ತು

Prasthutha|

ವಾಷಿಂಗ್ಟನ್: ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮೋಫೋಬಿಯಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಮೆರಿಕ ಸಂಸತ್ತು ಮಸೂದೆ ಅಂಗೀಕರಿಸಿದೆ.

- Advertisement -

ಡೆಮಾಕ್ರಟಿಕ್ ಸಂಸದ ಇಲ್ಹಾನ್ ಉಮರ್ ಮಂಡಿಸಿದ ಮಸೂದೆಯನ್ನು 219 ಮತಗಳ ಮೂಲಕ ಸಂಸತ್ತು ಅಂಗೀಕರಿಸಿದೆ. ಮಸೂದೆಗೆ ಈಗ ಅಧ್ಯಕ್ಷ ಜೋ ಬಿಡನ್ ಸಹಿ ಹಾಕಬೇಕಾಗಿದೆ.

ಎಲ್ಲಾ ಧರ್ಮಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ವೈಟ್ ಹೌಸ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿರುವುದರಿಂದ ಶ್ವೇತಭವನವು ಮಸೂದೆಗೆ ಬೆಂಬಲ ನೀಡುವ ನಿರೀಕ್ಷೆಯಿದೆ.

- Advertisement -

ಮಿನಿಸೋಟಾ ಸ್ಟೇಟ್ ಅನ್ನು ಭಯೋತ್ಪಾದಕ ವಲಯ ಎಂದು ಕರೆದ ರಿಪಬ್ಲಿಕನ್ ಸಂಸದ ಲಾರೆನ್ ಬಯೋಬರ್ಟ್ ಅವರನ್ನು ಸಮಿತಿಯ ಕರ್ತವ್ಯಗಳಿಂದ ತೆಗೆದುಹಾಕಲು ವಿಶೇಷ ಕ್ರಮ ಕೈಗೊಂಡ ಒಂದು ವಾರದ ನಂತರ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.

ಮಿನಿಸೋಟಾದ ಡೆಮಾಕ್ರಟಿಕ್ ಸಂಸದ ಇಲ್ಹಾನ್ ಉಮರ್ ಅವರನ್ನು ಭಯೋತ್ಪಾದಕ ಎಂದು ಬಯೋಬರ್ಟ್ ಕರೆದಿದ್ದರು.

Join Whatsapp