ಉ.ಪ್ರದೇಶ: ಬಂಧಿತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ

Prasthutha|

ಉ.ಪ್ರದೇಶ: ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್‌ – ರಾಜಕಾರಣಿ ಮುಖ್ತಾರ್ ಅನ್ಸಾರಿ (63) ಅನ್ಸಾರಿ ನಿಧನರಾಗಿರುವುದಾಗಿ ವರದಿಯಾಗಿದೆ.

- Advertisement -

ಹೃದಾಯಾಘಾತವಾದ ಅನ್ಸಾರಿ ಅವರನ್ನು ಬಂದಾ ಜಿಲ್ಲೆಯ ರಾಣಿ ದುರ್ಗಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರ ವಕೀಲರು ತಿಳಿಸಿದ್ದಾರೆ.

ಇಂದು ರಾತ್ರಿ 8:25 ರ ಸುಮಾರಿಗೆ ಅಪರಾಧಿ ಹಾಗೂ ವಿಚಾರಣಾಧೀನ ಕೈದಿಯಾಗಿದ್ದ ಸುಮಾರು 63 ವರ್ಷ ವಯಸ್ಸಿನ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ‌ ಎಂದುರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಅನ್ಸಾರಿ ವಾಂತಿ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಜೈಲಲ್ಲಿ ಬಿದ್ದಿದ್ದು, ಕೂಡಲೇ ನಮ್ಮ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಕರೆತಂದಿದ್ದರು. ಸುಮಾರು 9 ವೈದ್ಯರ ತಂಡ ರೋಗಿಗೆ ತಕ್ಷಣದ ವೈದ್ಯಕೀಯ ಸೇವೆಯನ್ನು ಒದಗಿಸಿದರೂ ಕೂಡ, ಚಿಕಿತ್ಸೆಗೆ ಸ್ಪಂದಿಸದೆ ಅವರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಕಟನೆ ವಿವರಿಸಿದೆ.

ಮಂಗಳವಾರ, ಅನ್ಸಾರಿ ಅವರನ್ನು ಬಂದಾ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬಿಡುಗಡೆ ಮಾಡಲಾಗಿತ್ತು. ಜೈಲಿನಲ್ಲಿ ಆಹಾರದಲ್ಲಿ ವಿಷ ಬೆರೆಸಿದ್ದನ್ನು ಮುಕ್ತಾರ್ ಅನ್ಸಾರಿ ಸೇವಿಸಿದ್ದಾರೆ ಎಂದು ಅವರ ಸಹೋದರ ಅಫ್ಜಲ್ ಅನ್ಸಾರಿ ಹೇಳಿದ್ದರು.

ಐದು ಬಾರಿ ಶಾಸಕರಾಗಿದ್ದ ಅನ್ಸಾರಿ ಎಂಟು ಪ್ರಕರಣಗಳನ್ನು ಎದುರಿಸುತ್ತಿದ್ದರು. ವರದಿಗಳ ಪ್ರಕಾರ, ಅನ್ಸಾರಿ ಸಾವಿನ ಬಳಿಕ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು 144 ಸೆಕ್ಷನ್ ವಿಧಿಸಿದ್ದಾರೆ.



Join Whatsapp