ಆಗುಂಬೆ ಘಾಟಿಯಲ್ಲಿ ಲಾರಿಯ ಟೈರ್ ಸ್ಫೋಟ: ವಾಹನ ಸಂಚಾರ ಅಸ್ತವ್ಯಸ್ತ

Prasthutha|


ಶಿವಮೊಗ್ಗ : ಕ್ಯಾಂಟರ್ ಲಾರಿಯ ಹಿಂಬದಿ ಟೈರ್ ಸ್ಫೋಟಗೊಂಡು ರಸ್ತೆ ಮಧ್ಯೆ ಲಾರಿ ನಿಂತಿದ್ದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ಆಗುಂಬೆ ಘಾಟಿಯ 8ನೇ ತಿರುವಿನಲ್ಲಿ ನಡೆದಿದೆ.


ತಿರುವಿನಲ್ಲೇ ಲಾರಿ ನಿಂತಿದ್ದ ಕಾರಣ ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಕ್ರೇನ್ ತರಿಸಿ ಲಾರಿಯನ್ನು ಪಕಕ್ಕೆ ಸರಿಸಿದ ಬಳಿಕ ವಾಹನಗಳು ಸುಗಮವಾಗಿ ಸಂಚರಿಸಲು ಪ್ರಾರಂಭಿಸಿತು.

- Advertisement -