ಧ್ವಜಾರೋಹಣ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಯುವಕರು ಮೃತ್ಯು

Prasthutha|

ಮುಲುಗು: ಗಣರಾಜ್ಯೋತ್ಸವದ ವೇಳೆ ಭಾರೀ ದುರಂತ ಸಂಭವಿಸಿದೆ. ಧ್ವಜಾರೋಹಣ ಮಾಡುವಾಗ ವಿದ್ಯುತ್ ತಂತಿಗಳು ಧ್ವಜದ ಪೈಪ್ ಗೆ ತಗುಲಿ ಇಬ್ಬರು ಯುವಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲಾ ಕೇಂದ್ರದ ದಲಿತವಾಡದಲ್ಲಿ ನಡೆದಿದೆ.

- Advertisement -


ಧ್ವಜ ಅನಾವರಣಕ್ಕಾಗಿ ಸ್ಥಳೀಯ ಯುವಕರು ಕಬ್ಬಿಣದ ಕಂಬದಿಂದ ಧ್ವಜವನ್ನು ಹಾರಿಸಲು ತಯಾರಿ ನಡೆಸುತ್ತಿದ್ದರು. ಆ ವೇಳೇ ಆಕಸ್ಮಿಕವಾಗಿ ವಿದ್ಯುತ್ ತಂತಿ ಕಬ್ಬಿಣದ ಪೈಪ್ಗೆ ತಾಗಿದೆ. ವಿದ್ಯುತ್ ತಂತಿಗಳು ಧ್ವಜಕ್ಕೆ ತಗುಲಿದ ಪರಿಣಾಮ ವಿಜಯ್, ಚಕ್ರಿ ಮತ್ತು ಅಜಿತ್ ಸಾವನ್ನಪ್ಪಿದ್ದಾರೆ. ತಕ್ಷಣ ಅವರನ್ನು ಮುಲುಗು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಯಾವುದೇ ಫಲ ಸಿಗಲಿಲ್ಲ.


ಚಿಕಿತ್ಸೆ ಫಲಕಾರಿಯಾಗದೆ ಅಜಿತ್ ಮತ್ತು ವಿಜಯ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.



Join Whatsapp