ಉಡುಪಿ: ಪವಿತ್ರ ಉಮ್ರಾ ಯಾತ್ರೆಗೆ ತೆರಳಿದ್ದ ಇಬ್ಬರು ಮಹಿಳೆಯರು ಮೃತ್ಯು

Prasthutha|

ಉಡುಪಿ: ಸೌದಿ ಅರೇಬಿಯಾದ ಮಕ್ಕಾ-ಮದೀನಾಗೆ ಪವಿತ್ರ ಉಮ್ರಾ ಯಾತ್ರೆ ನಿರ್ವಹಿಸಲು ತೆರಳಿದ್ದ ಉಡುಪಿ ಜಿಲ್ಲೆಯ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಡೆದಿದೆ.

- Advertisement -

ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿಯ ಮರಿಯಮ್ಮ(66) ಹಾಗೂ ಖತಿಜಮ್ಮ(68) ಮೃತಪಟ್ಟವರು. ಇವರು ಮಂಗಳೂರಿನ ಏಜೆನ್ಸಿ ಮೂಲಕ ಇತರ 32 ಮಂದಿ ಜೊತೆಗೆ ಮಾ.1ರಂದು ಮಂಗಳೂರಿನಿಂದ ಮಕ್ಕಾಕ್ಕೆ ತೆರಳಿದ್ದರು.

ಉಮ್ರಾ ಮುಗಿಸಿ ಮದೀನಾಕ್ಕೆ ಹೋಗುವ ತಯಾರಿ ನಡೆಸುತ್ತಿದ್ದಾಗ ಮರಿಯಮ್ಮ ಮಾ.9ರಂದು ಭಾರತೀಯ ಕಾಲಮಾನ ಬೆಳಿಗ್ಗೆ 5 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟರು. ಎರಡು ದಿನಗಳ ನಂತರ ಅಂದರೆ ಮಾ.11ರಂದು ಭಾರತದ ಕಾಲಮಾನ ಅಪರಾಹ್ನ 3 ಗಂಟೆಗೆ ಖತಿಜಮ್ಮ ಅನಾರೋಗ್ಯದಿಂದ ಮೃತಪಟ್ಟರು. ಇವರ ತಂಡದಲ್ಲಿ ಮೃತರು ಸೇರಿದಂತೆ ಕೋಟ ಮಧುವನ ಅಚ್ಲಾಡಿಯ 4 ಮಂದಿ ಮಹಿಳೆಯರಿದ್ದರು. ಮೃತರಿಬ್ಬರು ಸಂಬಂಧಿಗಳಾಗಿದ್ದು, ಇವರ ಅಂತ್ಯಕ್ರಿಯೆಯನ್ನು ಮಕ್ಕಾದಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿ

Join Whatsapp